

ಚಿತ್ರದುರ್ಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ನಡೆಸಲಿರುವ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳನ್ವಯ ಬ್ಲಾಕ್‌ಗಳನ್ನು ರಚಿಸುವ ಕಾರ್ಯದಲ್ಲಿ ಚಿತ್ರದುರ್ಗ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿವೆ. 150 ಕುಟುಂಬಗಳಿಗೆ ಒಂದು ಬ್ಲಾಕ್ ರಚಿಸಬೇಕು. ಚಕ್ಕುಬಂದಿ ನಮೂದಿಸಿ, ಬಡಾವಣೆ ವಿವರವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಕಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಗರದ ಕೆಳಗೋಟೆಯಲ್ಲಿ ಮಂಗಳವಾರ ಬ್ಲಾಕ್ ರಚನೆಗೆ ಸಂಬಂಧಿಸಿದಂತೆ ನಗರಸಭೆ ಆಯುಕ್ತೆ ಎಸ್.ಲಕ್ಷ್ಮೀ, ಕಚೇರಿ ವ್ಯವಸ್ಥಾಪಕ ಟಿ. ಜಯಪ್ಪ ಪರಿಶೀಲನೆ ನಡೆಸಿದರು.