ಸಾಮಾಜಿಕ ಬದಲಾವಣೆಯ ಹರಿಕಾರ ಕನಕ ಈ ನಾಡಿನ ವಿವೇಕ

18 ckm 5
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸುಜಾತಾ ಶಿವಕುಮಾರ್, ರೇಖಾ ಹುಲಿಯಪ್ಪಗೌಡ, ಗಾಯತ್ರಿ ಶಾಂತೇಗೌಡ, ಎಚ್.ಎಸ್.ಕೀರ್ತನಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದಿ ಸಾಮಾಜಿಕ ಬದಲಾವಣೆಗೆ ಕಾರಣರಾದ ಕನಕ ಈ ನಾಡಿನ ವಿವೇಕ ಎಂದು ಹಾಸನ ಜಿಲ್ಲೆ ಬಾಣವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ದೊರೇಶ್ ಬಿಳಿಕೆರೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಸೋಮವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕನಕದಾಸರು ನಾಡಿನ ಶ್ರೇಷ್ಠ ಕವಿ, ಸಂತ, ಮಹಾನ್ ದಾರ್ಶನಿಕ. ತಮ್ಮ ಕೀರ್ತನೆಗಳು, ಕಾವ್ಯ, ಕೃತಿಗಳ ಮೂಲಕ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಜಾತಿ ಪದ್ಧತಿ, ಮೌಡ್ಯಗಳು ಹಾಗೂ ಸಮಾಜದ ಇನ್ನಿತರ ಅನಿಷ್ಠ ಪದ್ಧತಿಗಳ ಬಗ್ಗೆ ತಮ್ಮ ಸರಳ ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಇವರ ಜೀವನ ಸಾಧನೆಗಳು ಮಾನವ ಕುಲಕ್ಕೆ ದಾರಿದೀಪವಾಗಿದೆ ಎಂದರು.

ಕನಕ ಈ ನೆಲದ ಆಸ್ತಿ. ತಾನು ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎಂದು ತಂಬೂರಿ ಹಿಡಿದು ಸಾಹಿತ್ಯದ ಮೂಲಕ ಸಮಾಜಿದ ಬಿರುಕನ್ನು ಜೋಡಿಸಿದ ವ್ಯಕ್ತಿತ್ವ ಅವರದು. ಸತ್ಯವಂತರ ಸಂಗವಿರಲು ತೀರ್ಥವೇತಕೆ, ನಿತ್ಯ ಅನ್ನದಾನವಿರಲು ಭಯವೇತಕೆ ಎಂದು ಹೇಳಿದ್ದ ಕನಕದಾಸರು ಜೀವನದಲ್ಲಿ ಬಾಳುವೆ ಮುಖ್ಯವೇ ವಿನಾ, ಜಾತಿ ಮುಖ್ಯವಲ್ಲ ಎಂದು ಸಾರಿದ್ದರು ಎಂದು ಹೇಳಿದರು.

ಭಕ್ತಿ ಬೋಧನೆಗಳನ್ನು ತುಂಬಿರುವ, ವಿಶ್ವ ಮಾನವ ಸಂದೇಶ ಸಾರುವ ಕನಕ ದಾಸರ ಕೀರ್ತನೆಗಳು ಇಂದಿನ ವಿದ್ಯಮಾನದಲ್ಲೂ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತವೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಸಮಾಜದಲ್ಲಿ ಎಲ್ಲರೂ ಸಮಾನರು ಎಲ್ಲರ ಮೇಲೆಯೂ ದಯೆ ಇರಬೇಕು. ಕುಲ ಕುಲವೆಂದು ಹುಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ, ನಾನು ನೀನು ಎನ್ನದಿರು ಹೀನ ಮಾನವ, ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಎಂದು ಸರಳ ಕೀರ್ತನೆಗಳೊಂದಿಗೆ ಜನ ಸಾಮಾನ್ಯರಿಗೆ ಸಮಾನತೆಯ ಶಿಕ್ಷಣ ನೀಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗಿರುವ ದಾಸ ಶ್ರೇಷ್ಠ ಕನಕರ ತತ್ವದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು, ಬಾಡಗ್ರಾಮ ಕನಕರ ಜನ್ಮ ಸ್ಥಳವಾಗಿದೆ. ಹರಕೆ ಫಲವಾಗಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದ ಕನಕರ ಬಾಲ್ಯದ ಹೆಸರು ತಿಮ್ಮಪ್ಪ ನಾಯಕ. ಕನಕ ಮಹಾಪುರುಷರು ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವರನ್ನು ಸಮಾನವಾಗಿ ಕಾಣುವ ಅವರ ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಅವರು ಹಾಕಿಕೊಟ್ಟಿರುವ ಹೆಜ್ಜೆ ಗುರುತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮನುಷ್ಯನು ಸದಾ ಸನ್ಮಾರ್ಗದಲ್ಲಿ ಬಾಳಬೇಕು. ನಿತ್ಯ ಕಲಿಯಲು, ಭಕ್ತಿ ಮಾರ್ಗ ಅನುಸರಿಸಲು ಯಾವುದೇ ಜಾತಿ ಕಟ್ಟುಪಾಡುಗಳಿಲ್ಲ. ವಿಶಾಲ ಮನಸ್ಸಿನಿಂದ ಪೂಜಿಸಿದರೆ ದೇವರು ಎಲ್ಲರಿಗೂ ಒಬ್ಬನೇ ಎಂದು ಕನಕರು ಸಾರಿದ್ದಾರೆ. ಕನಕರ ಜೀವನವೇ ಉತ್ಸಾಹದ ಚಿಲುಮೆ, ಮನಸ್ಸಿಗೆ ಚೈತನ್ಯ ಸ್ಪೂರ್ತಿ ತುಂಬುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂಥ ಮಹನೀಯರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸಪಂಥದಲ್ಲಿ, ಹರಿದಾಸರಲ್ಲಿ ಕನಕರ ಹೆಸರು ಅವಿಸ್ಮರಣೀಯವಾಗಿದೆ. ಜನಸಾಮನ್ಯರೊಂದಿಗೆ ಬೆರೆತು ಜನರ ದನಿಯಾದ ಮಹಾನುಭಾವ ತಮ್ಮ ತತ್ವ ಸಿದ್ದಾಂತಗಳನ್ನು ಆಡು ಭಾಷೆಯಲ್ಲಿ ಜನರಿಗೆ ತಿಳಿಸಿದವರು. ಭಕ್ತನಿಗೆ ಜಾತಿ ಅಲ್ಲ ನೀತಿ ಮುಖ್ಯ ಎಂದು ಸಾರಿದ ಕನಕರು ಸಮಾಜದಲ್ಲಿನ ತಾರತಮ್ಯ ವ್ಯವಸ್ಥೆ ವಿರುದ್ಧ ಸೆಟೆದು ನಿಂತವರು. ಜಾತಿಪದ್ದತಿ, ತಾರತಮ್ಯದಿಂದ ನೊಂದು ವ್ಯವಸ್ಥೆ ವಿರುದ್ಧ ಪ್ರತಿಕ್ರಿಯಿಸಿದ ಭಕ್ತ ಕನಕದಾಸ ಶ್ರೇಷ್ಠರು. ಇಂತಹ ಮಹಾತ್ ಸಂತರ ಪಡೆದಿರುವುದು ನಮ್ಮ ನಾಡಿನ ಹೆಮ್ಮೆ. ಇವರ ವಿಚಾರಧಾರೆಗಳನ್ನು ಯುವ ಜನತೆಗೆ ತಿಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ವಿಕ್ರಮ ಅಮಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮAತ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕಿ ರೇಖಾ ಹುಲಿಯಪ್ಪ ಗೌಡ, ಜಿಲ್ಲಾ ಕರುಬ ಸಂಘದ ಅಧ್ಯಕ್ಷ ಕೆ.ಎಂ.ಮAಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಸಮಾಜದ ಮುಖಂಡೆ ಗಾಯತ್ರಿ ಶಾಂತೇಗೌಡ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್ ಚಂದ್ರೇಗೌಡ ಮತ್ತಿತರರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಭಕ್ತಶ್ರೇಷ್ಠ ಕನಕದಾಸರ ಭಾವಚಿತ್ರವನ್ನು ವಿವಿಧ ಕಲಾತಂಡಗಳೊAದಿಗೆ ತಾಲೂಕು ಕಚೇರಿ ಆವರಣದಿಂದ ಎಂ.ಜಿ ರಸ್ತೆ ಮೂಲಕ ಕುವೆಂಪು ಕಲಾಮಂದಿರದÀರೆಗೆ ಮೆರವಣಿಗೆ ನಡೆಸಲಾಯಿತು. ಶಾಸಕ ಎಚ್.ಡಿ ತಮ್ಮಯ್ಯ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net