ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದ ಓರ್ವ ವಶಕ್ಕೆ

Arrest
Published on

ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಕಾಗವಾಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿ ಬಂಧಿತ ಆರೋಪಿ. ದೆಹಲಿ ಮೂಲದ ಇನ್ನೋರ್ವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಲವು ತಿಂಗಳಿಂದ ಆರೋಪಿಯು ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳ ಯುವಕರ ಸಭೆ ನಡೆಸಿ ಪ್ರಚೋದಿಸುತ್ತಿದ್ದ. ಕೋಮು ಪ್ರಚೋದನೆ ಉಂಟು ಮಾಡುವ ಪೋಸ್ಟ್​ಗಳನ್ನು ಜಾಲತಾಣದಲ್ಲಿ ಹಾಕುತ್ತಿದ್ದ. ಅದಕ್ಕೆ ದೆಹಲಿ ಮೂಲದ ಆರೋಪಿ ಸ್ಪಂದಿಸುತ್ತಿದ್ದ. ಅದಲ್ಲದೆ ಸಿಗ್ನಲ್​ ಆ್ಯಪ್​ ಬಳಸಿ ಗ್ರೂಪ್​ ಒಂದನ್ನು ರಚಿಸಿದ್ದರು.
ವಾಟ್ಸ್​ಆ್ಯಪ್​ ಗ್ರೂಪ್​, ಗೂಗಲ್​ ಮೀಟ್​ ಸಭೆಯಲ್ಲೂ ಪ್ರಚೋದನೆ ಮಾಡುತ್ತಿದ್ದರು. ಆರೋಪಿಗಳ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಲಾಗಿತ್ತು. ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net