

ಸಾಮಾಜಿಕ ಜಾಲತಾಣದಲ್ಲಿ ಎಂಇಎಸ್ ಪುಂಡಾಟ
ಪೊಲೀಸರ ಬಗ್ಗೆ ಅವಹೇಳನಕಾರಿ ಪೋಸ್ಟ್
ಬೆಳಗಾವಿ
ಕನ್ನಡ ಪರ ಹೋರಾಟಗಾರರ ಬಗ್ಗೆ ಅವಹೇಳಕಾರಿ ಮಾತನಾಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಶುಭಂ ಶೆಳ್ಳೆಯನ್ನು ಬಂಧಿಸಲಾಗಿದೆ.ಆದರೆ ಎಂಇಎಸ್ ಪುಂಡಾಟ ಮಾತ್ರ ನಿಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಕುರಿತಾಗಿ ಅವಹೇಳನಕಾರಿ ಪದ ಪ್ರಯೋಗಿಸುವ ಮೂಲಕ ಮತ್ತೆ ಉದ್ಧಟತನ ಪ್ರದರ್ಶಿಸಿದ್ದಾರೆ.
ಎಂಇಎಸ್‌ನ ಯುವ ಸಮಿತಿ ಸೀಮಾಭಾಗ್ ಪೇಜ್‌ನಲ್ಲಿ ಪೊಲೀಸರ ಅವಹೇಳನ ಮಾಡಿ, ಸಂದೇಶಯೊಂದನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಶುಭಂ ಶೆಳ್ಳೆಯನ್ನು ರಾಜ್ಯ ಪೊಲೀಸರು ಬಂಧಿಸಿರುವ ಫೋಟೊವನ್ನು ಹಾಕಿ, 'ಸಮಿತಿಯ ಸಿಂಹ ಏಕಾಂಗಿಯಾಗಿ ಹೋರಾಡುತ್ತಿದೆ. ಸಾವಿರಾರು ನಾಯಿಗಳು ಸಿಂಹವನ್ನು ಮುಗಿಸಲು ಬೆನ್ನತ್ತಿವೆ. ಆದರೇ ಸಿಂಹ ಮುಗಿಸಲು ನಾಯಿಗಳಿಂದ ಸಾಧ್ಯವಾಗುತ್ತಿಲ್ಲ' ಎಂದು ಪೊಲೀಸರ ಕುರಿತು ವಿವಾದಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.