ಸಾಮಾಜಿಕ ಜಾಲತಾಣದಲ್ಲಿ 5.51 ಲಕ್ಷ ವಂಚನೆ

ಸಾಮಾಜಿಕ ಜಾಲತಾಣದಲ್ಲಿ 5.51 ಲಕ್ಷ ವಂಚನೆ
Published on

ಹಾಸನ: ನಗರದ ಔಷಧಿ ವ್ಯಾಪಾರಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಔಷಧಿಗಳನ್ನು ಖರೀದಿ ಮಾಡಲು ಹೋಗಿ 5.51 ಲಕ್ಷ ಹಣವನ್ನು ಕಳೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಹುಣಸಿನಕೆರೆ ರಸಯಲ್ಲಿ ಮೆಡಿಕಲ್ಸ್ ಅಂಗಡಿ ಮಾಲೀಕರು ಪೇಸ್‌ಬುಕ್ ನೋಡುತ್ತಿದ್ದ ವೇಳೆ ಔಷಧಿಗಳು ಕಡಿಮೆ ಬೆಲೆಯಲ್ಲಿ ಇರುವುದನ್ನು ಗಮನಿಸಿ, ಅಲ್ಲಿ ನೀಡಲಾಗಿದ್ದ ಅಪರಿಚಿತ ವ್ಯಕ್ತಿಯ 9233969729 ಸಂಖ್ಯೆಗೆ ಕರೆ ಮಾಡಿ ಆರ್ಡರ್ ಮಾಡಿದ್ದಾರೆ.

ನಂತರ ಕಂಪನಿಯ ಹೆಸರೇಳಿಕೊಂಡು ಮುಂಗಡವಾಗಿ ಹಣ ನೀಡುವಂತೆ ತಿಳಿಸಿದ್ದಾರೆ.

ಜೂ.6ರಂದು 28,500 ಹಣವನ್ನು ಆ ಅಪರಿಚಿತ ವ್ಯಕ್ತಿಯ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಖಾತೆಗೆ ಹಣ ಜಮೆ ಮಾಡಿದ್ದಾರೆ. ಮತ್ತೆ ಜೂ. 7ರಂದು ಕರೆ ಮಾಡಿ ಔಷಧಿ ಬೇಕಿದ್ದರೆ ಪುನಃ ಹಣ ಹಾಕುವಂತೆ ತಿಳಿಸಿದ್ದಾರೆ. ಅದರಂತೆ ಮೆಡಿಕಲ್ಸ್ ಅಂಗಡಿ ಮಾಲೀಕರು ಅದೇ ದಿನ 2,22,980 ರೂ. ಗಳನ್ನು ಖಾತೆಗೆ ಪಾವತಿಸಿದ್ದಾರೆ.

ಮತ್ತೆ ಜೂ. 8ರಂದು 3 ಲಕ್ಷವನ್ನು ವರ್ಗಾವಣೆ ಮಾಡಿದ್ದಾರೆ. ಆಮೇಲೆ ಅದೇ ನಂಬರ್‌ಗೆ ಔಷಧಿಗಳ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಆ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. 5 ದಿನವಾದರೂ ಔಷಧಿಗಳು ಬಾರದ ಇದ್ದುದರಿಂದ ತಾನು ಮೋಸ ಹೋಗಿರುವುದಾಗಿ ತಿಳಿದು, ಜೂ.13ರಂದು ನಗರದ ಸಿ.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net