ಸಾಮಾಜಿಕ ಜಾಲತಾಣ ಆಗಲಿ ಸದ್ಬಳಕೆ

CTD DAMMA
Published on

ಚಿತ್ರದುರ್ಗ: ಸೋಷಿಯಲ್ ಮೀಡಿಯಾಗಳನ್ನು ಎಚ್ಚರಿಕೆಯಿಂದ ಬಳಸಬೇಕಿದೆ ಎಂದು ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಕಿವಿಮಾತು ಹೇಳಿದರು.
ನಗರದ ದಮ್ಮಾ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಹದಿಹರೆಯ ಬಾಲಕಿಯರ ಜಾಗೃತಿ ಹಾಗೂ ಸಾಮಾಜಿಕ ಜಾಲತಾಣಗಳಿಂದ ಯುವ ಜನರ ಮೇಲಾಗುತ್ತಿರುವ ಪರಿಣಾಮಗಳ ಕುರಿತ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳು ಸಮಾಜಕ್ಕೆ ಪೂರಕ ಮತ್ತು ಮಾರಕವಾಗಿದ್ದು, ಬಳಕೆ ವೇಳೆ ಎಚ್ಚರಿಕೆ ಅಗತ್ಯ ಎಂದರು.
ಕರ್ನಾಟಕ ವಿದ್ಯಾರ್ಥಿ ಯುವಜನ ಸಂಘಟನೆ ಅಧ್ಯಕ್ಷ ಸರೋವರ್ ಸೂರ್ಯದೇವ ಮಾತನಾಡಿ, ಸಾಮಾಜಿಕ ಜಾಲತಾಣಗಳ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚೆಂದು ಆತಂಕ ವ್ಯಕ್ತಪಡಿಸಿದರು.
ಎಂ.ಕೆ.ಹಟ್ಟಿ ಉಪಾಧ್ಯಕ್ಷೆ ಅನ್ನಪೂರ್ಣಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕರಾದ ಆರ್.ವಿಶ್ವಸಾಗರ್, ಅರಣ್ಯ ಸಾಗರ್, ಬಿಬಿಜಾನ್, ನಾಗರತ್ನಾ, ಕುಮಾರ್, ಮಮತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net