

ಬಾಗಲಕೋಟೆ: ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ಭಾರತೀಯ ಜೀವವಿಮಾ ನಿಗಮ ಸಾಮಾಜಿಕ ವ್ಯವಸ್ಥೆಗೂ ಅಪಾರ ಕೊಡುಗೆ ನೀಡುತ್ತಿರುವ ಮಹಾನ್ ಸಂಸ್ಥೆಯಾಗಿದೆ ಎಂದು ನಿವೃತ್ತ ಹಿರಿಯ ಅಭಿವೃದ್ಧಿ ಅಽಕಾರಿ ಸಿ.ಸಿ.ಕೋರೆಗೋಳ ಹೇಳಿದರು.
ನವನಗರದ ಎಲ್‌ಐಸಿ ಶಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೬೮ ನೇ ವಿಮಾ ಸಪ್ತಾಹದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಾರ್ವಜನಿಕರು ಇಟ್ಟಿರುವ ನಂಬಿಕೆ, ವಿಶ್ವಾಸ ಹಾಗೂ ಪ್ರತಿನಿಽಗಳ ಶ್ರಮ ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆಯಿಂದಾಗಿ ಇಂದು ಎಲ್‌ಐಸಿ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ವಿವಿಧ ವಿಮಾ ಕಂಪನಿಗಳ ನಡುವಿನ ಪೈಪೋಟಿಯಲ್ಲೂ ಎಲ್‌ಐಸಿ ಅಪ್ರತಿಮ ಪ್ರಗತಿ ಸಾಽಸಿ ಮುಂಚೂಣಿಯಲ್ಲಿದೆ. ಪಾಲಿಸಿದಾರರಿಗೆ ಸಮರ್ಪಕ ಸೇವೆ ಒದಗಿಸಲಾಗುತ್ತಿದ್ದು, ಪಾಲಸಿದಾರ ಮರಣಿಸಿದಾಗ ಯಾವುದೇ ವಿಳಂಬ ಮಾಡದೇ ವಾರಸುದಾರರಿಗೆ ವಿಮೆ ಪರಿಹಾರ(ಕ್ಲೇಮ್)ನೀಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಹೇಳಿದ ಕೋರೆಗೋಳ, ಸಂಸ್ಥೆಯನ್ನು ಸದೃಢವಾಗಿ ಬೆಳೆಯಲು ಸಾರ್ವಜನಿಕರು, ಪ್ರತಿನಿಽಗಳು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಹಿರಿಯ ಆಡಳಿತಾಽಕಾರಿ ಜಗದೀಶ ಹೂಲಗೇರಿ ಮಾತನಾಡಿ, ೬೮ ವರ್ಷಗಳ ಹಿಂದೆ ಸ್ಥಾಪನೆಗೊಂಡ ಎಲ್‌ಐಸಿ ತನ್ನ ಪ್ರಗತಿಯಲ್ಲಿ ಹಿನ್ನಡೆ ಸಾಽಸಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಗತಿಯ ಮುನ್ನೋಟ ನೀಡುತ್ತಲೇ ಸಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಎಲ್‌ಐಸಿ ಜಗತ್ತಿನಲ್ಲಿಯೇ ಒಂದನೇ ಸ್ಥಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಾಖಾಽಕಾರಿ ರಕ್ಷಿತ ಮಾತನಾಡಿ, ಭಾರತೀಯ ಜೀವವಿಮಾ ನಿಗಮ ಜನರ ವಿಶ್ವಾಸ ಹಾಗೂ ನಂಬಿಕೆಯ ಮೇಲೆ ಗಟ್ಟಿಯಾಗಿ ಬೆಳೆದಿದೆ. ಪ್ರತಿನಿಽಗಳ ಅವಿರತ ಶ್ರಮ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಹೆಸರು ಮಾಡಿದೆ. ಭವಿಷ್ಯದ ಭಾರತ ಕಟ್ಟುವಲ್ಲಿ ಎಲ್‌ಐಸಿ ಮಹತ್ತರ ಪಾತ್ರ ನಿರ್ವಹಿಸಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಸಪ್ತಾಹದ ಅಂಗವಾಗಿ ೭ ದಿನಗಳ ಕಾಲ ಶಾಲಾ ಮಕ್ಕಳು, ಪ್ರತಿನಿಽಗಳು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಟ್ರೋಫಿ ನೀಡಲಾಯಿತಲ್ಲದೇ, ಆಡಳಿತಾಽಕಾರಿಗಳಾದ ಡಿ.ಬಿ.ಕೊಂಬಿನವರ, ಅರುಣ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಉಪ ಶಾಖಾಽಕಾರಿ ರೇವಣಸಿದ್ದೇಶ್ವರ, ಅಭಿವೃದ್ಧಿ ಅಽಕಾರಿಗಳಾದ ಕೆ.ದಯಾನಂದ, ಎ.ಎಸ್.ತೊಗರಿ, ಎ.ಎಚ್.ಬದಾಮಿ, ರವಿ ಮುರನಾಳ, ಮಂಜುನಾಥ ರಾಠೋಡ ಇನ್ನಿತರರು ಇದ್ದರು. ನಗರದ ೧೬ ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಆಡಳಿತಾಽಕಾರಿ ನಾಗಲಕ್ಷಿ÷್ಮÃ ಸ್ವಾಗತಿಸಿದರು. ಆರ್.ಬಿ.ರಾಯಬಾಗಿ ಪರಿಚಯಿಸಿದರು. ಅಭಿವೃದ್ಧಿ ಅಽಕಾರಿ ಎ.ಆರ್.ಜಂಬಗಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಂ.ಸಾಸನೂರ ನಿರೂಪಿಸಿದರು. ಜಿ.ವೈ.ಸತರಡ್ಡಿ ವಂದಿಸಿದರು.