ಸಾಮಾಜಿಕ ಕಾರ್ಯಗಳಲ್ಲೂ ತೊಡಗಬೇಕು

bkt-16-2
ಬಾಗಲಕೋಟೆ ನಗರದ ಅಂಬೇಡ್ಕರ ಭವನದಲ್ಲಿ ಭಾನುವಾರ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
Published on

ಬಾಗಲಕೋಟೆ: ಸಹಕಾರಿ ಸಂಘಗಳು ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ನವಗರದ ಡಾ.ಅಂಬೇಡ್ಕರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ೯ನೇ ವಾರ್ಷಿಕ ಮಹಾಸಭೆ, ಜಿಲ್ಲೆಯ ರಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ರಡ್ಡಿ ನೌಕರರು ಪತ್ತಿನ ಸಹಕಾರಿ ಸಂಘ ಸ್ಥಾಪಿಸುವುದರ ಜೊತೆಗೆ ಸಮಾಜ ಸಂಘಟನೆಯನ್ನು ಸಹ ಮಾಡಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಮಾಡಿ ಇನ್ನುಳಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿರುವುದು ಶ್ಲಾಘನೀಯ ಎಂದ ಪಾಟೀಲ, ಸಂಘ ನೌಕರರ ಹಿತ ಕಾಯುವ ಮೂಲಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಇತರೆ ಸಮಾಜಗಳ ಪ್ರೀತಿ, ವಿಶ್ವಾಸದೊಂದಿಗೆ ರಡ್ಡಿ ಸಮಾಜ ಬೆಳೆದು ಬಂದಿದೆ. ಸ್ವಾಭಿಮಾನಿ ಬದುಕು ನಮ್ಮದಾಗಿದ್ದು, ಇತರರ ಪ್ರೀತಿ ಗಳಿಸಿ ಅವರನ್ನು ಒಟ್ಟಿಗೆ ಕರೆದೊಯ್ಯುವ ಔದಾರ್ಯತೆ ರಡ್ಡಿ ಸಮಾಜದ್ದಾಗಿದ್ದು, ರಡ್ಡಿ ಸಹಕಾರಿ ಸಂಘ ಸಮಾಜದ ವಿದ್ಯಾರ್ಥಿಗಳ ಜೊತೆ ಬೇರೆ ಸಮಾಜದ ಪ್ರತಿಭಾವಂತರನ್ನು ಸನ್ಮಾನಿಸುವ ಮೂಲಕ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ತತ್ವ ಸಂದೇಶಗಳನ್ನು ಪಾಲಿಸಿ ನಡೆಯುತ್ತಿದೆ ಎಂದು ತಿಳಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ, ನಿರ್ದೇಶಕ ಎಸ್.ಬಿ.ಮಾಚಾ, ಸಂಘದ ಬೆಳವಣಿಗೆ, ಕೈಗೊಂಡಿರುವ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಸಂಘದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಸಮಾಜದ ಎಲ್ಲ ನೌಕರರು, ನಿರ್ದೇಶಕ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಯ ಸಹಕಾರದಿಂದ ಸಂಘ ಪ್ರಗತಿಯನ್ನು ಸಾಽಸಿ ಮುನ್ನಡೆದಿದೆ ಎಂದರು.

ಸಂಘದ ಅಧ್ಯಕ್ಷ ಆರ್.ಎಸ್.ಪಾಟೀಲ ಸಂಘದ ವಾರ್ಷಿಕ ವರದಿ ಮಂಡಿಸಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಹೇಮ-ವೇಮ ಸಂಸ್ಥೆ ಅಧ್ಯಕ್ಷ ಆರ್.ಎಲ್.ಕಟಗೇರಿ, ಜಿಲ್ಲಾ ರಡ್ಡಿ ಯುವ ಸೇನೆ ಅಧ್ಯಕ್ಷ ನಾರಾಯಣ ಹಾದಿಮನಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಕೋನಪ್ಪನವರ, ಮಲ್ಲಿಕಾರ್ಜುನ ಮೇಟಿ, ಶಿಕ್ಷಣಾಽಕಾರಿ ಎಚ್.ಜಿ.ಮಿರ್ಜಿ, ಉದ್ಯಮಿ ಶಂಕರ ದೇಸಾಯಿ, ಹೇಮ ವೇಮನ ಸದ್ಬೋಧನ ಪೀಠದ ಮಾಲತೇಶ ಅಮಾತೆಪ್ಪನವರ, ಸಂಘದ ಉಪಾಧ್ಯಕ್ಷ ಎಸ್.ಪಿ.ಜೈನಾಪುರ, ನಿರ್ದೇಶಕರಾದ ಎಸ್.ಪಿ.ನಿಂಗನಗೌಡ್ರ, ಆರ್.ಎಸ್.ಪಾಟೀಲ, ಬಿ.ಬಿ.ರಕರಡ್ಡಿ, ಬಿ.ಎಸ್.ನಾಲತವಾಡ, ಎ.ಎಂ.ಎಮ್ಮಿ, ಆರ್.ಪಿ.ಹಳೇಮನಿ, ಎಸ್.ಆರ್.ಬೇವೂರ, ಲೋಕೇಶ್ವರಿ ಪರಡ್ಡಿ, ಕಾಶೀಬಾಯಿ ಅರಕೇರಿ ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಮಾಜದ ೮೫ ವಿದ್ಯಾರ್ಥಿಗಳು, ೨೨ ಜನ ನಿವೃತ್ತ ನೌಕರರು, ಆದರ್ಶ ಶಿಕ್ಷಕರು, ದಾನಿಗಳನ್ನು ಸನ್ಮಾನಿಸಲಾಯಿತು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿಯವರು ಪ್ರಾರ್ಥಿಸಿದರು. ಅಶೋಕ ಎಮ್ಮಿ ಸ್ವಾಗತಿಸಿದರು. ಸಂಜಯ ನಡುವಿನಮನಿ, ಪಾಂಡು ಸನ್ನಪ್ಪನವರ, ಉಮಾ ಕೆಳಗಿನಗೌಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net