

ಉಳ್ಳಾಗಡ್ಡಿ-ಖಾನಾಪುರ: ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆ ಅರಿತು ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜದ ಬಗ್ಗೆ ಕಳಕಳಿ ಹೊಂದಬೇಕು ಎಂದು ಹತ್ತರಗಿಯ ಹರಿಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಹೇಳಿದರು.
ಸಮೀಪದ ಹಂಚಿನಾಳ ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬೆಳಗಾವಿ ಹಾಗೂ ಯಮಕನಮರಡಿ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಸೇವಾ ಮನೋಭಾವನೆ ಬೆಳೆಸಿಕೊಂಡು ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಿ ಎಂದರು. ಕಾರ್ಯದರ್ಶಿ ಜೆ.ಎನ್.ಆವಾಡೆ ಮಾತನಾಡಿದರು.
ಮಲ್ಲಪ್ಪ ಮುಗಳಿ, ಪ್ರಾಚಾರ್ಯ ಎ.ಎಸ್.ಗುತ್ತಿ, ರಾಜು ರೇವಣ್ಣವರ, ಪತ್ರಕರ್ತರಾದ ಗೋಪಾಲ ಚಪಣಿ, ಎ.ಎಂ.ಕರ್ನಾಚಿ, ಗ್ರಾಪಂ ಸಿಬ್ಬಂದಿ ಯಲ್ಲಪ್ಪ ನಾಯಿಕ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ವಿಜಯ ಮೇದಾರ ಸ್ವಾಗತಿಸಿದರು.