ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಿ

21 gkp 03
Published on

ಗೋಣಿಕೊಪ್ಪ: ಶಿಕ್ಷಣದ ಜತೆ ಸಾಮಾಜಿಕ ಕಳಕಳಿ ಇರಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಹೇಳಿದರು.


ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಕೌಶಲಾಧಾರಿತ ಶಿಕ್ಷಣ ಪಡೆದು ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಹಂತಕ್ಕೆ ಬೆಳೆಯಬೇಕು ಎಂದರು.


ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ದಾನಿಗಳಾದ ಅಳಮೇಂಗಡ ಮುರುಳಿ ಮುತ್ತಣ್ಣ, ವಿವೇಕಾನಂದ ಸರ್ವೀಸ್ ಸೊಸೈಟಿ ಅಧ್ಯಕ್ಷ ಎಲ್.ರವೀಂದ್ರ, ವೈದ್ಯ ಡಾ.ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ, ಗ್ರಾಪಂ ಅಧ್ಯಕ್ಷ ಪೋಡಮಾಡ ಸುಕೇಶ್ ಭೀಮಯ್ಯ, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್, ಪಾಂ್ರಶುಪಾಲ ಎಸ್.ಕೆ.ಪ್ರಭು, ಮುಖ್ಯ ಶಿಕ್ಷಕ ಚಂದ್ರಶೇಖರ್ ಎಂ.ಪಿ. ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net