

ಚಾಮರಾಜನಗರ: ಕರೊನಾ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದರೂ ಪಡಿತರ ವಿತರಣೆಗಾಗಿ ಮೂಗಿಬೀಳುವ ಜನರ ನಡುವೆ ತಾಲೂಕಿನ ಕೋಡಿಮೊಳೆ ಗ್ರಾಮಸ್ಥರು ಮಾದರಿಯಾಗಿದ್ದಾರೆ. ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ 3 ಮೀಟರ್‌ಗೆ ಹಾಕಿರುವ ವೃತ್ತದಲ್ಲಿ ನಿಂತ ಜನರು ಶಿಸ್ತಿನಿಂದ ಒಬ್ಬರ ನಂತರ ಮತ್ತೊಬ್ಬರು ಸಾಲಾಗಿ ಸಾಗಿ ಆಹಾರ ಪದಾರ್ಥ ಪಡೆದರು.