ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಶಿಕ್ಷಕರಿಗೆ ಸಲಹೆ

Speech by T.G.Leelavathi--02
Published on

ಚಿತ್ರದುರ್ಗ: ಶಿಕ್ಷಕರಿಗೆ ತಾಂತ್ರಿಕ ಜ್ಞಾನದರಿವಿನ ಅಗತ್ಯವಿದೆ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ(ಸಿಟಿಇ)ಸಹನಿರ್ದೇಶಕಿ ಟಿ.ಜಿ. ಲೀಲಾವತಿ ಹೇಳಿದರು. ಬೆಂಗಳೂರು ಅಕ್ಷರ ಫೌಂಡೇಶನ್ ನಗರದ ಡಯಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಗಣಿತ ಕಲಿಕಾ ಆಂದೋ ಲನ ಆನ್‌ಲೈನ್ ಕೋರ್ಸ್‌ಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಯಾದಂತೆ ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲೂ ಬದಲಾವಣೆ ಮಾಡಿಕೊಂಡು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಮಾತನಾಡಿ,ಗಣಿತ ವಿಷಯದಲ್ಲಿ ಪರಿಣಾಮಕಾರಿಯಾದ ಕಲಿಕೆಗೆ ಆನ್‌ಲೈನ್ ಕೋರ್ಸ್ ಸಹಕಾರಿಯಾಗಿದೆ ಎಂದರು. ಅಕ್ಷರ ಫೌಂಡೇಶನ್ ಕಾರ‌್ಯಕ್ರಮ ವ್ಯವಸ್ಥಾಪಕ ಹನುಮಂತರಾಯ ಕಣ್ಣಿ ಮಾತನಾಡಿ,ಶಿಕ್ಷಕರ ಬೋಧನಾ ಸಾಮರ್ಥ್ಯ ಸಬಲೀಕರಣಕ್ಕಾಗಿ ಡಿಎಸ್‌ಇಆರ್‌ಟಿ ಜತೆಗೂಡಿ ಫೌಂಡೇಶನ್ ಗಣಿತ ಕಲಿಕಾ ಆಂದೋಲನ ಹಮ್ಮಿಕೊಂಡಿದೆ ಎಂದರು.

ರಾಜ್ಯದೀಕ್ಷಾ ನೋಡಲ್ ಅಧಿಕಾರಿ ಶರಣಬಸವಗೌಡ ಮಾತನಾಡಿದರು. ಡಯಟ್ ಹಿರಿಯ ಉಪನ್ಯಾಸಕರಾದ ಇ.ಹಾಲಮೂರ್ತಿ, ಎಸ್.ಸಿ ಪ್ರಸಾದ್, ಡಿವೈಪಿಸಿಸಿಎಂ ತಿಪ್ಪೇಸ್ವಾಮಿ ಉಪನ್ಯಾಸಕರಾದ ಆರ್.ನಾಗರಾಜು,ಎಸ್.ಬಸವರಾಜು,ವಿ.ಕನಕಮ್ಮ,ಕೆ.ಜಿ.ಪ್ರಶಾಂತ್, ಯು.ಸಿದ್ದೇಶಿ, ಸಿ.ಎಸ್.ಲೀಲಾವತಿ,ಬಿಆರ್‌ಸಿಗಳಾದ ಸಂಪತ್‌ಕುಮಾರ್,ತಿಪ್ಪೇರುದ್ರಪ್ಪ,ಶ್ರೀನಿವಾಸ್,ತಾಂತ್ರಿಕ ಸಹಾಯಕರಾದ ಆರ್. ಲಿಂಗರಾಜು,ಕೆ.ಆರ್.ಲೋಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net