ಸಾಮರಸ್ಯದಿಂದ ಗಣೇಶೋತ್ಸವ ಆಚರಿಸಿ

06..5
ತೆಲಸಂಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಂತಿಪಾಲನೆ ಸಭೆಯಲ್ಲಿ ಪಿಎಸ್‌ಐ ಎಸ್.ಡಿ.ಆಸಂಗಿ ಮಾತನಾಡಿದರು. ವಿಲಾಸ ಮೋರೆ, ಸಿದ್ದಲಿಂಗ ಮಾದರ, ಸಂಗಮೇಶ ಕಂದಾರೆ ಇತರರಿದ್ದರು.
Published on

ತೆಲಸಂಗ: ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಪೊಲೀಸ್, ಹೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ಪರವಾನಗಿ ಪಡೆದುಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಐಗಳಿ ಪಿಎಸ್‌ಐ ಎಸ್.ಡಿ.ಆಸಂಗಿ ಎಚ್ಚರಿಸಿದರು.

ಗ್ರಾಮದ ಗ್ರಾಪಂ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಂತಿಪಾಲನೆ ಸಭೆಯಲ್ಲಿ ಮಾತನಾಡಿ, ಕಾನೂನು ಇರುವುದು ಜನರ ನೆಮ್ಮದಿ ಕಾಪಾಡಲು. ಗಣೇಶ ಹಬ್ಬವನ್ನು ಇನ್ನೊಬ್ಬರಿಗೆ ನೋವುಂಟಾಗದಂತೆ ಸಾಮರಸ್ಯದಿಂದ ಆಚರಿಸಬೇಕು. ಕರ್ಕಶ ಧ್ವನಿವರ್ಧಕ ಬಳಕೆ, ಅಪಾಯಕಾರಿ ಪಟಾಕಿ ಸಿಡಿಸಬಾರದು. ಪಿಒಪಿ ಗಣಪತಿ ಬಳಸಬಾರದು ಎಂದರು. ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಸದಸ್ಯರಾದ ಸಿದ್ದಲಿಂಗ ಮಾದರ, ಸಂಗಮೇಶ ಕಂದಾರೆ, ಪರಶು ಕಂದಾರೆ, ಸಿ.ಸಿ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net