ಸಾಮರಸ್ಯ, ಸೌಹಾರ್ದ ಸಾಧ್ಯ

bhr sanmanaa
ಬಾಳೆಹೊನ್ನೂರಿನ ಪೇಟೆಕೆರೆ ವಿದ್ಯಾಗಣಪತಿ ಸೇವಾ ಸಮಿತಿಯ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಉದ್ದಯ್ಯ, ಮಂಜಯ್ಯ, ಮರಿಯಯ್ಯ, ಶೇಖರ್, ಸಂದೇಶ್ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಅರುಣೇಶ್, ಮಹಮ್ಮದ್ ಹನೀಫ್, ಬಿ.ಕೆ.ಮಧುಸೂದನ್, ಸಂದೀಪ, ನಾಗರಾಜ ಭಟ್ ಇತರರಿದ್ದರು.
Published on

ಬಾಳೆಹೊನ್ನೂರು: ಸಾರ್ವಜನಿಕ ಗಣೇಶೋತ್ಸವ ಆಯೋಜನೆಯಿಂದ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಬೆಳೆಯಲು ಸಾಧ್ಯವಿದೆ ಎಂದು ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಹೇಳಿದರು.

ಪಟ್ಟಣದ ಪೇಟೆಕೆರೆಯಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 18ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜ್ಞಾನ, ವಿವೇಕ, ಕೌಶಲಕ್ಕೆ ಹೆಸರಾದ ದೇವ ಗಣೇಶನಾಗಿದ್ದು, ಆದ್ದರಿಂದಲೇ ಗಣೇಶೋತ್ಸವಕ್ಕೆ ಪ್ರಾಮುಖ್ಯ ಹೆಚ್ಚಿದೆ ಎಂದರು.

ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಸಮರ ಸಾರಲು ರಾಷ್ಟ್ರಮಟ್ಟದಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಪ್ರಾರಂಭಿಸಿ ಅಧ್ಯಾತ್ಮ ಚಿಂತನೆ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿ ಮೂಡಿಸಿದರು. ಇಂದು ಹಲವು ಕಡೆಗಳಲ್ಲಿ ಜಾತಿ, ಮತ, ಭೇದ ತೊಡೆದು ಗಣೇಶೋತ್ಸವ ಆಚರಿಸಿ ಸರ್ವಧರ್ಮ ಸಮನ್ವಯ ಕಾಣುತ್ತೇವೆ ಎಂದರು.

ಪೇಟೆಕೆಯ ಹಿರಿಯರಾದ ಉದ್ದಯ್ಯ, ಮಂಜಯ್ಯ, ಮರಿಯಯ್ಯ, ಶೇಖರ್, ಸಂದೇಶ್ ಅವರನ್ನು ಗೌರವಿಸಲಾಯಿತು.

ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿ.ಸಂದೀಪ, ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್, ಪತ್ರಕರ್ತ ಬಿ.ಎಸ್.ನಾಗರಾಜ ಭಟ್, ಶ್ರೀಕಾಂತ್, ಲಂಕೇಶ್, ದಿವಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net