

ಕೆಂಭಾವಿ: ಸೌಹಾರ್ದತೆ, ಐಕ್ಯತೆ ಮತ್ತು ಸಮಾನತೆಯ ಸಾಮರಸ್ಯ ಸಾರುವ ಹಬ್ಬವೇ ನೂಲು ಹುಣ್ಣಿಮೆಯಾಗಿದೆ ಎಂದು ವರ್ತಕ ಸುಮಿತ್ರಪ್ಪ ಅಂಗಡಿ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಶ್ರೀ ಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಗುರುವಾರ ಏರ್ಪಡಿಸಿದ್ದ ಮಾಸಿಕ ಹುಣ್ಣಿಮೆ ಶಿವಾನುಭವ ಗೋಷ್ಠಿ ಉದ್ಘಾಟಿಸಿದ ಅವರು, ಸರಳತೆಯಲ್ಲಿ ಹೃದಯವಂತಿಕೆ ಕಾಣುವ ರಾಖಿ ಹಬ್ಬ ಸಹೋದರ-ಸಹೋದರಿ ಭಾವನಾತ್ಮಕ ಸಂಬಂಧದ ಬೆಸುಗೆಯಾಗಿದೆ ಎಂದರು.
ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣಯ್ಯ ಸ್ವಾಮಿ ಹಿರೇಮಠ ಉಪನ್ಯಾಸ ನೀಡಿದರು. ಕುಮಾರ ಉಲ್ಲಾಸ ಡಿಗ್ಗಾವಿ ಯೋಗ ಪ್ರದರ್ಶನ ನಡೆಸಿಕೊಟ್ಟರು. ಲಿಂಗನಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಚನ್ನಯ್ಯಸ್ವಾಮಿ ಚಿಕ್ಕಮಠ, ಡಾ.ಎ.ಜಿ.ಹಿರೇಮಠ, ಹಳ್ಳಪ್ಪಗೌಡ ಪಾಟೀಲ್, ನಿಂಗನಗೌಡ ದೇಸಾಯಿ, ಡಿ.ಸಿ.ಪಾಟೀಲ್, ವೀರಣ್ಣ ಕಲಿಕೇರಿ, ಮೋಹನರಡ್ಡಿ ಡಿಗ್ಗಾವಿ, ಜಯಶ್ರೀ ಹಿರೇಮಠ, ಪವಿತ್ರಾ ವಡ್ಡೆ, ಉಮಾದೇವಿ ಪಾಟೀಲ್, ಡಾ.ಯಂಕನಗೌಡ ಪಾಟೀಲ್ ಇತರರಿದ್ದರು.
ಸಿದ್ಧಲಿಂಗಸ್ವಾಮಿ ಹಿರೇಮಠ ಚಿಂಚೋಳಿ ಮತ್ತು ಶಶಿಧರ ಯಾಳಗಿ ಸಂಗೀತ ಸೇವೆ ಸಲ್ಲಿಸಿದರು. ಗುಡದಯ್ಯ ದಾವಣಗೆರೆ ಮತ್ತು ರಮೇಶ ಸೊನ್ನದ ಅನ್ನದಾಸೋಹ ನಡೆಸಿಕೊಟ್ಟರು. ಕೇದಾರ ಯಾತ್ರಾರ್ಥಿ ಪ್ರಕಾಶ ಜಕ್ಕರಡ್ಡಿ ಅವರನ್ನು ಸನ್ಮಾನಿಸಲಾಯಿತು.