ಸಾಮರಸ್ಯ ಬೆಳೆಸುತ್ತಿರುವ ರೋಟರಿ ಸಂಸ್ಥೆ

champions league
Published on

ಹುಬ್ಬಳ್ಳಿ: ನಗರದ ಬಿಡಿಕೆ ಮೈದಾನದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ ಆಯೋಜಿಸಿರುವ ರೋಟರಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಗೆ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಚೇರ್ಮನ್ ಗೋವಿಂದ ಜೋಶಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಕ್ರೀಡಾಕೂಟಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ನಡೆಸುತ್ತಿದೆ ಹಾಗೂ ಆ ಮೂಲಕ ಜನರಲ್ಲಿ ಸಾಮರಸ್ಯ ಬೆಳೆಸುತ್ತಿದೆ. ರೋಟರಿ ಸಂಸ್ಥೆಯು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ ಅಧ್ಯಕ್ಷ ದಿನೇಶ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಅಸಿಸ್ಟಂಟ್ ಗರ್ವನರ್ ಸಂಜನಾ ಮಹೇಶ್ವರಿ, ಅರುಣ ಅಗಡಿ, ಪ್ರಶಾಂತ್ ಹೆಗ್ಡೆ, ನಾಗರಾಜ ಶೆಟ್ಟಿ, ಸುಮೇರ್ ಓಸ್ವಾಲ್, ಎಲ್ಲ ತಂಡಗಳ ಮಾಲೀಕರು ಉಪಸ್ಥಿತರಿದ್ದರು. ರಾಹುಲ ವಿಕಂಸಿ ವಂದಿಸಿದರು. ಸಂಜಯ್ ಕುನ್ನತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net