ಸಾಮರಸ್ಯ ಜೀವನದಿಂದ ಮೌಲ್ಯಗಳಿಗೆ ಗೌರವ

IMG_20221111_192551
ಹೊಳೆನರಸೀಪುರ ಕರಾರಸಾನಿ ಘಟಕದ ಆವರಣದಲ್ಲಿ ಕನಕದಾಸರ 535ನೇ ಜಯಂತಿಯನ್ನು ಸಿಬ್ಬಂದಿ ವರ್ಗದವರು ಆಚರಿಸಿದರು.
Published on

ಹೊಳೆನರಸೀಪುರ: ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದರಿಂದ ದಾರ್ಶನಿಕರ ಮೌಲ್ಯಗಳಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಳೆನರಸೀಪುರ ಘಟಕದ ವ್ಯವಸ್ಥಾಪಕ ಪಾಪನಾಯಕ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕದ ಸಿಬ್ಬಂದಿ ವರ್ಗದಿಂದ ಘಟಕದ ಆವರಣದಲ್ಲೇ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಕನಕದಾಸರ ತತ್ವಗಳನ್ನು ಎಲ್ಲರೂ ಪಾಲಿಸೋಣ ಎಂದರು.

ಉಪನ್ಯಾಸಕ ಡಿ.ಕೆ.ಕುಮಾರಯ್ಯ ಮಾತನಾಡಿದರು. ಚನ್ನರಾಯಪಟ್ಟಣ ಘಟಕ ವ್ಯವಸ್ಥಾಪಕಿ ಶಾಜಿಯ ಬಾನು, ಶಿಕ್ಷಕ ಮಲ್ಲರಾಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net