ಸಹಕಾರಿ ಸಂಘಗಳಿಂದ ಬದುಕು ಕಟ್ಟಲು ಸಾಧ್ಯ

ca
ca
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಅರಸಿ ಬರುವಂತಹ ಸಾವಾಜಿಕ ಸಮಸ್ಯೆಗೆ ನಾವು ನೀವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕಿದೆ. ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಸ್ಥೆಗಳು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ನಾವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಕೈಗಾರಿಕೆಗಳೂ ನಮ್ಮ ದುಡಿಯುವ ಕೈಗಳಿಗೆ ಉದ್ಯೋಗ ನೀಡುವಲ್ಲಿ ಹಿಂಜರಿಯಬಾರದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹೆಜವಾಡಿ ಶಾಖಾ ಕಟ್ಟಡದಲ್ಲಿರುವ ಎಚ್.ನಾರಾಯಣ ಸಭಾಂಗಣವನ್ನು ಭಾನುವಾರ ಉದ್ಘಾಟಿಸಿ ವಾತನಾಡಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಶುಭಹಾರೈಸಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಸಿಎ ಬ್ಯಾಂಕ್ ನಿವೃತ್ತ ಸಿಬ್ಬಂದಿ ಶ್ರೀನಿವಾಸ ಭಟ್, ಶಕುಂತಳಾ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ‌್ಯಾಂಕ್ ಪಡೆದ ಭೂಮಿಕಾ ಎಚ್.ಪುತ್ರನ್ ಅವರನ್ನು ಅಭಿನಂದಿಸಲಾಯಿತು. 2024-25 ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶ ಸಾಧಿಸಿದ ಸೊಸೈಟಿ ವ್ಯಾಪ್ತಿಯ ಶಾಲೆಗಳನ್ನು ಹಾಗೂ ಪಿ.ಯು.ಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 95% ಮೇಲ್ಪಟ್ಟು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ವಾಜಿ ಸಚಿವ ವಿನಯ ಕುವಾರ್ ಸೊರಕೆ, ಹೆಜವಾಡಿ ಗ್ರಾ.ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಿ.ಅಶೋಕ್ ಕುವಾರ್ ಶೆಟ್ಟಿ ಮೈರ್ವಾಡಿ ಕರ್ಜೆ, ಬಿ.ಅಶೋಕ್ ಕುವಾರ್ ಶೆಟ್ಟಿ ಬೆಳ್ಳಂಪಳ್ಳಿ. ಎಚ್.ಬಿ.ಮೊಹಮ್ಮದ್, ಪ್ರಭಾರ ಸಿಇಒ ಶೋಭಾ ಎಚ್.ಪುತ್ರನ್ ಉಪಸ್ಥಿತರಿದ್ದರು. ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುವಾರ್ ಸ್ವಾಗತಿಸಿದರು. ವಿಕ್ಷಿತಾ ನಿರೂಪಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಇಲಾಖೆ ಹಾಗೂ ಜಿಲ್ಲಾಡಳಿತದ ಮನೆಗೊಂದು ಸಸಿ ನೆಟ್ಟು ಪೋಷಿಸುವ ಸಂದೇಶವನ್ನು ವಿದ್ಯಾರ್ಥಿಗಳು ಪಾಲಿಸಿ ಸ್ವಚ್ಛ ಪರಿಸರ ನಿರ್ವಾಣದಲ್ಲಿ ಕೈಜೋಡಿಸಬೇಕು. ಹೆಚ್ಚು ಗಿಡ ನೆಟ್ಟ ಹಾಗೂ ಸ್ವಚ್ಛತೆಯ ಹೆಚ್ಚು ಕಾರ್ಯಕ್ರಮ ವಾಡಿದ ಸಹಕಾರ ಸಂಸ್ಥೆಗಳಿಗೆ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ಬಹುವಾನ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಿ.ಜಯಕರ ಶೆಟ್ಟಿ ಇಂದ್ರಾಳಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ https://www.vijayavani.net/tribute-to-retired-head-teacher-indira-bayar https://www.vijayavani.net/house-handed-over-to-bhagavata-thimmappa-devadiga

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net