ಸಾಧು ಶರಣರ ಮಾರ್ಗದಲ್ಲಿ ನಡೆಯಿರಿ:ಶ್ರೀ.ವಿನಯ್ ಕುಮಾರ್ ಸ್ವಾಮೀಜಿ ಕರೆ

ಸಾಧು ಶರಣರ ಮಾರ್ಗದಲ್ಲಿ ನಡೆಯಿರಿ:ಶ್ರೀ.ವಿನಯ್ ಕುಮಾರ್ ಸ್ವಾಮೀಜಿ ಕರೆ
Published on

ಹಾಸನ: ಸಾಧು ಶರಣರು ಹಾಕಿಕೊಟ್ಟಿರುವಂತಹ ಮಾರ್ಗವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಸಾಧಿಸಲು ಸಾಧ್ಯ ಎಂದು ತಣ್ಣೀರುಹಳ್ಳಮಠದ ಪರಮಪೂಜ್ಯ ಶ್ರೀ ವಿನಯ್ ಕುಮಾರ್ ಸ್ವಾಮೀಜಿ ತಿಳಿಸಿದರು.

ನಗರದ ಬಿ.ಎಂ. ರಸ್ತೆಯಲ್ಲಿರುವ ಯುನೈಟೆಡ್ ಅಕಾಡೆಮಿ ಶಾಲೆಯ ಜ್ಞಾನ ಮಂಟಪದಲ್ಲಿ ಶನಿವಾರ ನಡೆದ ಶ್ರಾವಣ ಮಾಸದ ಚಿಂತನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪಾಶ್ಚತ್ಯ ಸಂಸ್ಕೃತಿಗೆ ಹೆಚ್ಚು ಮಾರುಹೋಗುತ್ತಿದ್ದಾರೆ. ಆದರೆ ಹೊರದೇಶದವರು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಇದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.

ಆಯುರ್ವೇದ ಆಸ್ಪತ್ರೆಯ ಸಹಪ್ರಾಧ್ಯಪಕ ಹಾಗೂ ಯೋಗ ತಜ್ಞ ಡಾ.ಗುರುಬಸವರಾಜ್ ಯಲಗಚ್ಚಿ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಯು.ಎಸ್. ಬಸವರಾಜು, ಯುನೈಟೆಡ್ ಅಕಾಡೆಮಿ ಶಾಲೆಯ ಸಂಸ್ಥಾಪಕ ಸಿ.ಎಂ. ಚಂದ್ರಶೇಖರ್, ಎನ್.ಡಿ.ಆರ್.ಕೆ. ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಎಸ್.ಹೆಚ್. ಬಸವರಾಜು, ಜಯಶ್ರೀ ಬಸವರಾಜ್, ಸುವರ್ಣ ರಾಮಚಂದ್ರ, ಶಿವನಂಜೇಗೌಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net