ಸಾಧಿಸುವ ಛಲವುಳ್ಳವರಿಗೆ ಪ್ರೇರಣೆ

04KOTTUR 01
Published on

ಕೊಟ್ಟೂರು: ಅಸಾಧ್ಯವಾದ ಸಾಧನೆ, ಯಾರೂ ನಿರೀಕ್ಷಿಸದ ಕಾರ್ಯ ಪೂರ್ಣಗೊಳಿಸಿದರೆ ಭಗೀರಥ ಪ್ರಯತ್ನ ಎನ್ನುತ್ತೇವೆ. ಇದು ಬಗೀರಥ ಮಹರ್ಷಿಯ ಮಹತ್ವ ತಿಳಿಸುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಎಂ.ಪ್ರತಿಭಾ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಹರ್ಷಿ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸಾಧಿಸುವ ಛಲವುಳ್ಳವರಿಗೆ ಭಗೀರಥ ಮಹರ್ಷಿ ಪ್ರೇರಣೆಯಾಗಿದ್ದಾರೆ ಎಂದರು.

ಉಪ್ಪಾರ ಸಮುದಾಯದ ಪ್ರಮುಖ ಎನ್.ಕಲ್ಲಪ್ಪ ಮಾತನಾಡಿ, ಅತ್ಯಂತ ಕಠಿಣವಾದ ತಪಸ್ಸನ್ನು ಮಾಡಿದ ಭಗೀರಥರು. ಶಿವನನ್ನು ಒಲಿಸಿಕೊಂಡು ಜಡೆಯಲ್ಲಿರುವ ಗಂಗೆಯನ್ನು ಭೂಲೋಕಕ್ಕೆ ಕರೆತಂದು ಸಕಲ ಜೀವ ರಾಶಿಗಳಿಗೆ ನೀರಿನ ದಾಹವನ್ನು ತಣಿಸಿದ ಮಹಾತ್ಮರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net