ಸಾಧಿಸುವ ಛಲ ಇದ್ದರೆ ಯಶಸ್ಸು ಸಾಧ್ಯ

Success is possible if you have the will to achieve.
ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಾನ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸತಿಕ ಮತ್ತು ಕ್ರೀಡಾಚಟುವಟಿಕೆ ಸಮಾರೋಪದಲ್ಲಿ ಎಡಿಸಿ ಸೋಮಲಿಂಗ ಗೆಣ್ಣೂರ ಮಾತನಾಡಿದರು. ಡಾ. ವೈ. ತಮ್ಮಣ್ಣ, ಪ್ರೊ. ಐ.ಎಸ್​. ಕಾಳಪ್ಪನವರ, ಎಂ.ಎನ್​. ಚೋರಗಸ್ತಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಧಿಸುವ ಛಲ ಇದ್ದರೆ ಯಶಸ್ಸು ಸಾಧ್ಯ. ಯುವಜನತೆ ಸದಾ ಕಾರ್ಯಪ್ರವೃತ್ತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಾನ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸತಿಕ ಮತ್ತು ಕ್ರೀಡಾ ಚಟುವಟಿಕೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಸತತ ಓದುವ ಜತೆಗೆ ಉನ್ನತ ಹುದ್ದೆಗಳನ್ನು ಗಿಟ್ಟಿಸಲು ಪ್ರಯತ್ನ ನಡೆಸಿದರೆ ನಿಮ್ಮಲ್ಲಿ ಛಲ&ಹಂಬಲ ಅಳವಡಿಸಿಕೊಳ್ಳಬೇಕು. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಬೇಕು. ಅನವಶ್ಯಕ ವಿಚಾರ ಬಿಟ್ಟು ಸದಾ ಾನ ಪರವಾದ ಚಿಂತನೆ ಮಾಡಬೇಕು. ಸದೃಢವಾದ ದೇಹ ಸದೃಢವಾದ ಮನಸ್ಸು ಇರಬೇಕು. ವಿದ್ಯಾರ್ಥಿಗಳು ಯಾವಾಗಲೂ ತಂದೆ&ತಾಯಿ ಮತ್ತು ಶಿಕರನ್ನು ಗೌರವಿಸಬೇಕು ಎಂದರು.

ಅತಿಥಿ ನಿವೃತ್ತ ಉಪವಿಭಾಗಾಧಿಕಾರಿ ಎಂ.ಎನ್​. ಚೋರಗಸ್ತಿ ಮಾತನಾಡಿ, ಯುವಜನತೆ ಸದಾ ಹಿರಿಯರ ಮಾರ್ಗದರ್ಶನ ಪಾಲಿಸಬೇಕು. ಅವು ಜೀವನಕ್ಕೆ ದಾರಿದೀಪವಾಗಲಿವೆ. ಸಮಾಜ ಉದ್ಧಾರ ಮಾಡುವ ಶಕ್ತಿ ಯುವಜನತೆಯಲ್ಲಿದೆ. ಅದಕ್ಕಾಗಿ ನಾವು ಸದಾ ಜಾಗೃತವಾಗಬೇಕು ಎಂದು ಸಲಹೆ ನೀಡಿದರು.

ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಮಾತನಾಡಿ, ಪ್ರೊ. ಐ.ಎಸ್​. ಕಾಳಪ್ಪನವರ ಹಾಗೂ ಪ್ರೊ. ಎಸ್​.ಎಸ್​. ಕೋರಿ ಮಾತನಾಡಿದರು. ವಿದ್ಯಾರ್ಥಿನಿ ಸುಪ್ರಿಯಾ ಬನಸೋಡೆ ಸನ್ಮಾನಿಸಲಾಯಿತು. ಸಾಂಸತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಿ.ಎಸ್​. ತೋಳನೂರ ಸ್ವಾಗತಿಸಿ ಪರಿಚಯಿಸಿದರು. ದೀಪಾ ಲಗಳಿ ಹಾಗೂ ಡಾ. ಸವಿತಾ ಅಣೆಪ್ಪನವರ ವರದಿ ವಾಚಿಸಿದರು. ಎಚ್​.ಎಸ್​. ದೇಸಾಯಿ ಪ್ರಶಸ್ತಿ ವಿತರಣೆ ನೆರವೇರಿಸಿದರು.

ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು. ಡಾ. ಭಕ್ತಿ ಮಹೀಂದ್ರಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net