ಸಾಧಾರಣ ಮಳೆ

Published on

ಬಳ್ಳಾರಿ: ನಗರದಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರಿಗೆ ಒಂದಷ್ಟು ತಂಪೆರೆಯಿತು.
ಕಳೆದ ಎರಡ್ಮೂರು ತಿಂಗಳಿಂದ ಗರಿಷ್ಠ ಮಟ್ಟದ ತಾಪಮಾನದಿಂದ ಬಿಸಿಲಿಗೆ ಕಾದು ಕೆಂಡವಾಗಿದ್ದ ನಗರ, ಈಚೆಗೆ ಸುರಿದ ಒಂದಷ್ಟು ಮಳೆಯಿಂದು ತಂಪೆರೆದಿತ್ತು. ನಂತರದ ದಿನಗಳಲ್ಲಿ ಬಿಸಿಲಿನ ತಾಪಮಾನ ಒಂದಷ್ಟು ಕಡಿಮೆ ಎನಿಸಿದರೂ, ಅದರ ಝಳ ಮಾತ್ರ ಕಡಿಮೆಯಾಗಿರಲಿಲ್ಲ. ಪರಿಣಾಮ ಫ್ಯಾನ್, ಕೂಲರ್‌ಗಳು ಇಲ್ಲದೇ ಮನೆಗಳಲ್ಲಿ ಕೂಡಲು ಆಗುತ್ತಿರಲಿಲ್ಲ. ಇದೀಗ ಭಾನುವಾರ ಸಂಜೆಯೂ ಉತ್ತಮವಾಗಿ ಮಳೆಯಾಗಿದ್ದು, ಮತ್ತಷ್ಟು ತಂಪೆರದಿದೆ.
ಬೆಳಗ್ಗೆಯಿಂದ ಬಿರುಬಿಸಿಲು ಇದ್ದ ನಗರದಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆ ಸಾಧಾರಣವಾಗಿ ಮಳೆಯಾಗಿದೆ. ಇದರಿಂದ ಕಾದು ಕೆಂಡವಾಗಿದ್ದ ನಗರ ತಂಪಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net