ಸಾಧನೆಯಿಂದ ಶಾಲೆ, ಶಿಕ್ಷಕರ ಗೌರವ ಹೆಚ್ಚಿಸಿ

28blh1 kargil news at bailhongal
ಬೂದಿಹಾಳ ಶಾಲೆಗೆ ಭೇಟಿ ನೀಡಿದ ಮಹಾಂತೇಶ ಕವಟಗಿಮಠ ಅವರನ್ನು ಶಿಕ್ಷಕರು ಸನ್ಮಾನಿಸಿದರು. ಬಸವರಾಜ ನಾಗರಾಳ, ಸುಭಾಷ ಸಂಪಗಾವಿ, ಬಸವರಾಜ ಪೂಜೇರ, ಸುಮಿತ್ರಾ ಕುಲಕರ್ಣಿ, ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ವಿನಾಯಕ ಬಡಿಗೇರ, ಎಂ.ಬಿ.ಹೊಂಗಲ ಇತರರು ಇದ್ದರು.
Published on

ಬೈಲಹೊಂಗಲ: ಭಾರತದ ಅಭಿವೃದ್ಧಿ ಹಾಗೂ ಪ್ರಗತಿಯು ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

2020-21ನೇ ಸಾಲಿನಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡ ಪ್ರಯುಕ್ತ ‘ರಾಷ್ಟ್ರಪ್ರಶಸ್ತಿ’ ಲಭಿಸಿದ ತಾಲೂಕಿನ ಬೂದಿಹಾಳದ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಶಾಲೆಗೆ ಭೇಟಿ ನೀಡಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಛಲದಿಂದ ಮುನ್ನಡೆದರೆ ಸಾಧನೆ ಖಂಡಿತ ಸಾಧ್ಯ. ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಉನ್ನತ ಹುದ್ದೆ ಅಲಂಕರಿಸಿ, ಕಲಿತ ಶಾಲೆ ಹಾಗೂ ಕಲಿಸಿದ ಶಿಕ್ಷಕರಿಗೆ ಗೌರವ ತಂದು ಕೊಡಬೇಕು ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ್ ಬಸವರಾಜ ನಾಗರಾಳ, ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೂಜೇರ, ಉಪಾಧ್ಯಕ್ಷೆ ಸುಮಿತ್ರಾ ಕುಲಕರ್ಣಿ, ಪಿಡಿಒ ಡಿ.ಬಿ. ಅಮ್ಮಿನಬಾವಿ, ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ವಿನಾಯಕ ಬಡಿಗೇರ, ಎಂ.ಬಿ. ಹೊಂಗಲ, ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ಆರ್.ಸಿ.ಸೊರಟೂರ, ಜನಕರಾಜ ಪಾಟೀಲ, ಶಿವಯೋಗಿ ಕುಲಕರ್ಣಿ, ಮಹಾಬಲೇಶ್ವರ ಸೊಗಲದ, ಬಾಳಪ್ಪ ನಾಗಣ್ಣವರ, ಈರಪ್ಪ ಬಡಿಗೇರ ಹಾಗೂ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ, ಐ.ಎಸ್.ಮುದಗಲ ನಿರೂಪಿಸಿದರು. ಎಸ್.ಬಿ.ಭಜಂತ್ರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net