

ಚಿತ್ರದುರ್ಗ: ಹೆಣ್ಣು ಗಂಗೆಯಂತೆ. ಜಲವಿಲ್ಲದೆ ಏನೂ ಇಲ್ಲ. ಹಾಗೆಯೇ ಹೆಣ್ಣು ಮಕ್ಕಳು ಇಲ್ಲದೆ ಪ್ರಪಂಚವಿಲ್ಲ ಎಂದುಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಹೇಳಿದರು.
ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಂದು ಉತ್ತಮ ಸಾಧನೆ ಮಾಡಿದ್ದಾರೆ. ಸ್ತ್ರೀಯರನ್ನು ಗೌರವಿಸುವುದು ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ಶ್ರೀ ಅಂಜನಾ ನೃತ್ಯ ಕಲಾಕೇಂದ್ರದ ಭರತನಾಟ್ಯ ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಮಾತನಾಡಿ, ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಸ್ತ್ರೀ ಆದಿಶಕ್ತಿ, ಪ್ರತಿಯೊಬ್ಬರ ಗೆಲುವಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಬಸಂತಕುಮಾರಿ ಮಾತನಾಡಿದರು. ಪ್ರೊ.ಸುಷ್ಮಿತಾ ದೇಬ್, ಪ್ರೊ.ಎನ್.ಪವಿತ್ರಾ ಇದ್ದರು. ಪಿ.ಮೇಘನಾ ಸ್ವಾಗತಿಸಿದರು. ಸಿ.ಭೂಮಿಕಾ ನಿರೂಪಿಸಿದರು. ವಿ.ಕೆ.ಮೋನಿಕಾ ವಂದಿಸಿದರು.
ಡಿ.ಸಿ.ರುಕ್ಮಿಣಿ ಗಾಯನ ನಡೆಸಿಕೊಟ್ಟರು. ಜಿ.ಜೀವಿತಾ, ಆರ್.ಪ್ರಜ್ಞಾ ಅವರು ನೃತ್ಯ ಕಾರ‌್ಯಕ್ರಮ ಹಾಗೂ ಅನನ್ಯ ತಂಡದವರು ರೂಪಕ ಪ್ರದರ್ಶನ ನೀಡಿದರು.