ಸಾಧನೆಯತ್ತ ಎಲ್ಲರ ಗಮನವಿರಲಿ

7mjr1
Published on

ಮಾಂಜರಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಅಭಿತಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯ ಪ್ರಸಾದ ರಾಂಪುರ ಹೇಳಿದರು.

ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಎನ್‌ಎಸ್‌ಎಸ್ ಘಟಕದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪದವಿ ಶಿಕ್ಷಣ ಬದುಕಿನಲ್ಲಿ ಬದಲಾವಣೆ ತರುತ್ತದೆ. ನಿರ್ದಿಷ್ಟ ಗುರಿ ಸಾಧನೆಯತ್ತ ಎಲ್ಲರೂ ಗಮನ ಹರಿಸಬೇಕು ಎಂದರು.

ಪ್ರಾಚಾರ್ಯ ಎಂ.ಎಸ್.ಕಾಣಡೆ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರ ಕಾರ್ಯಾಧ್ಯಕ್ಷತೆಯಲ್ಲಿ ಕೆಎಲ್‌ಇ ಸಂಸ್ಥೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾರದಾದೇವಿ ಕೋರೆ ಪ್ರೌಢಶಾಲೆ ಉಪಪ್ರಾಚಾರ್ಯ ಜ್ಯೋತಿ ತಮ್ಮಗೌಡ, ಬಸಪ್ರಭು ಕೋರೆ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯ ಪಾರ್ಥ ಸಾರಥಿ, ನಂದಾ ಎಸ್‌ಸಿ ಪಾಟೀಲ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಂತೋಷ ಹಿರೇಮಠ, ಬಿಎಸ್ ಅಂಬಿ, ಅಕ್ಷಯ ಬೆಂಡೆ, ಎಸ್.ಬಿ. ಬೊಮ್ಮಣ್ಣವರ, ಪ್ರವೀಣ ಪೂಜಾರಿ, ಜ್ಯೋತಿ ಕಾನಡೆ, ಲಕ್ಷ್ಮಿ ಮೇತ್ರೆ, ಮೀನಾಕ್ಷಿ ಪೊಟೆ, ಕೇಸರಿ ವಾಘಮಾರೆ, ಎನ್.ಆರ್.ಉಮರಾನೆ ಇತರರಿದ್ದರು. ಆರ್.ಇ.ಕರ್ಗುಪ್ಪೆ ಸ್ವಾಗತಿಸಿದರು. ಎನ್.ಆರ್.ಉಮರಾಣಿ ವಾರ್ಷಿಕ ವರದಿ ಓದಿದರು. ಭಾಗ್ಯಶ್ರೀ ಬಾನಕರ ಮತ್ತು ಸ್ನೇಹಲ ಲಕ್ಕಣ್ಣವರ ನಿರೂಪಿಸಿದರು. ಪೂರ್ಣಿಮಾ ಕಾಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net