ಸಾಧನೆಗೆ ಸಿ.ವಿ. ರಾಮನ್ ಪ್ರೇರಣೆ

8 lxr 2...
Published on

ಲಕ್ಷೆ್ಮೕಶ್ವರ: ವಿದ್ಯಾರ್ಥಿಯಾಗಿದ್ದಾಗ ಸರ್ ಸಿ.ವಿ. ರಾಮನ್ ಅವರು ನೀಡಿದ ಉಪನ್ಯಾಸ ತಮ್ಮ ಮೇಲೆ ಪ್ರಭಾವ ಬೀರಿ ಏಕೆ ನಾನೂ ವಿಜ್ಞಾನಿಯಾಗಬಾರದು ಎಂದು ಮೂಡಿದ ಆಸಕ್ತಿ ಮತ್ತು ಕುತೂಹಲವೇ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ನನಗೆ ಪ್ರೇರಣೆಯಾಯಿತು ಎಂದು ಭಾರತ ರತ್ನ ಪ್ರೊ. ಸಿಎನ್​ಆರ್ ರಾವ್ ಅಭಿಪ್ರಾಯಪಟ್ಟರು.

ಚಂದನ ಶಾಲೆಯಲ್ಲಿ 2ನೇ ದಿನದ ವಿಜ್ಞಾನ ವಿಸõತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆಎನ್​ಸಿಯ ವಿಜ್ಞಾನಿಗಳಿಂದ ಬುಧವಾರ ಆಯೋಜಿಸಿದ್ದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ದೇಶ ಕಟ್ಟುವ ಸತ್ಪ್ರಜೆಗಳನ್ನು, ವಿಜ್ಞಾನಿಗಳನ್ನು, ವೈದ್ಯರು, ಇಂಜಿನಿಯರ್, ಶ್ರೇಷ್ಠ ಕೃಷಿಕರು, ಸಾಧಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಅವರ ಮೇಲಿದೆ. ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ ಪ್ರಯೋಗಾತ್ಮಕ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ ವಿಜ್ಞಾನದ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದರು.

ನಂತರ ಆಯೋಜಿಸಿದ್ದ ಚಂದನ ಸ್ಪಂದನ ಸಂವಾದ ಕಾರ್ಯಕ್ರಮದಲ್ಲಿ ಚಂದನ ಶಾಲೆ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಿಎನ್​ಆರ್ ರಾವ್, ಶ್ರೀಮತಿ ಇಂದುಮತಿರಾವ್ ಉತ್ತರಿಸಿದರು.

ಬೆಂಗಳೂರಿನ ಜೆಎನ್​ಸಿಯ ವಿಜ್ಞಾನಿಗಳಾದ ಎಸ್.ಎನ್. ಭಟ್ ರಾಸಾಯನಶಾಸ್ತ್ರ ಪ್ರಯೋಗಗಳು, ಡಾ. ಎನ್.ಎಸ್. ವಿದ್ಯಾಧಿರಾಜ ಅವರು ಭೌತಶಾಸ್ತ್ರ ಪ್ರಯೋಗಗಳು, ಯುವ ವಿಜ್ಞಾನಿ ಗೋವಿಂದರಾಜು ಭೂಮಿ ಜೀವರಾಶಿಯ ಉಗಮ, ದೈನಂದಿನ ಜೀವನದಲ್ಲಿ ರಾಸಾಯನಶಾಸ್ತ್ರ, ಜೀವರಾಶಿಗಳಲ್ಲಿಯ ಧಾತುಗಳು, ಅಣುಗಳು ಮತ್ತು ಪರಮಾಣುಗಳ ಪ್ರಾಮುಖ್ಯತೆ, ನೀರಿನ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಜೆಎನ್​ಸಿಯ ವಿಜ್ಞಾನಿಗಳಾದ ಜಿ.ಯು. ಕುಲಕರ್ಣಿ, ಎಸ್.ಎನ್. ಭಟ್, ಎಸ್.ಎಂ. ಶಿವಪ್ರಸಾದ್, ಉದಯರಂಗಾ, ಎಂ. ಈಶ್ವರ ಮೂರ್ತಿ, ಎನ್.ಎಸ್. ವಿದ್ಯಾಧಿರಾಜ, ಗೋವಿಂದರಾಜು, ಶೀಬಾ ವಾಸು, ವಿನಾಯಕ ಪತ್ತಾರ ಅವರು ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಸ್ತುತ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ವಿವಿಧ ಶಾಲೆ-ಕಾಲೇಜ್ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net