

ವಿಜಯವಾಣಿ ಸುದ್ದಿಜಾಲ ಗದಗ
ಸಾಧನೆಗೆ ಬಡತನ ಎಂಬುದುಎಂದಿಗೂ ಅಡತಡೆ ಮಾಡುವುದಿಲ್ಲ ಮತ್ತು ಅದು ಶಾಪವು ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗದಗ ಬೆಟಗೇರಿ ಇತಿಹಾಸದಲ್ಲೇ ಏಕಕಾಲಕ್ಕೆ 4 ಜನ ವಿದ್ಯಾಥಿರ್ಗಳು ಸಿ.ಎ. ಪರೀೆಯಲ್ಲಿ ತೇರ್ಗಡೆ ಹೊಂದಿದ ಹಿನ್ನೆಲೆ ಇತ್ತೀಚೆಗೆ ಸಾಧಕರನ್ನು ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು.
ಜೀವನದಲ್ಲಿ ಪ್ರಯತ್ನ ಹಾಗೂ ಪರಿಶ್ರಮದಿಂದ ಏನೆಲ್ಲಾ ಸಾಧಿಸಬಹುದು. ಈ ದಿಸೆಯಲ್ಲಿ ಸನ್ಮಾನಿತರೆಲ್ಲರೂ ಮದ್ಯಮ ವರ್ಗದ ಕುಟುಂಬಗಳಿಂದ ಬಂದವರಿದ್ದರೂ ಸತತ ಹೋರಾಟದ ಮೂಲಕ ಇನ್ನೂ ಹೆಚ್ಚಿನ ಸ್ಥಾನಕ್ಕೆ ಏರಬೇಕೆಂದು ತಿಳಿಸಿದರು.
ಸಿಎ ಪರೀೆ ತೇರ್ಗಡೆಯಾದ ಜೈಕಿಶನ್ ಕಬಾಡಿ, ವಿನಾಯಕ ಮೇರವಾಡೆ, ನಿಖಿಲ್ ಹಬೀಬ ಹಾಗೂ ಆಫ್ರಿನ್ ಮುಲ್ಲಾ ಇವರನ್ನು ಸನ್ಮಾನಿಸಲಾಯಿತು, ರವಿ ಕುಲಕಣಿರ್, ರವಿ ಜೀವನಗೌಡ್ರ, ಕುಮಾರಸ್ವಾಮಿ ಹಿರೇಮಠ, ರವಿ ಶಿದ್ಲಿಂಗ್, ಗಿರೀಶ ಕಬಾಡಿ, ಎನ್.ವಿ. ಜೋಷಿ, ಜಗದೀಶ ನರಗುಂದ ಇದ್ದರು.