

ಯಾದಗಿರಿ: ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು, ಜೀವನದಲ್ಲಿ ಯಶಸ್ಸು ದೊರಕಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ ಸಲಹೆ ನೀಡಿದರು.
ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಹಾಸಾಭಾದಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಕ ಅಂಕ ಪಡೆದ ವಿದ್ಯಾಥರ್ಿಗಳಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಮಾಜದ ವಿದ್ಯಾಥರ್ಿಗಳು ಓದಿನಲ್ಲಿ ಹಿಂದೆ ಬೀಳಬಾರದು ಎಂಬ ಕಾರಣದಿಂದ ಮಹಾಸಭಾ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 150ಕ್ಕೂ ಅಮಕ್ಕಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿನಲ್ಲಿ ಶೇ.90ಕ್ಕಿಂತ ಅಕ ಅಂಕ ಪಡೆದಿದ್ದಾರೆ. ಆದರೆ ಕೇವಲ 28 ಮಕ್ಕಳು ಮಾತ್ರ ಆನ್ಲೈನ್ನಲ್ಲಿ ಅರ್ಜಿ ಹಾಕಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅರ್ಜಿ ಹಾಕಬೇಕು. ಅವರಿಗೆ ಮಹಾಸಭಾದಿಂದ ಗೌರವಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಪಿಯುಸಿಯ 12, ಎಸ್ಸೆಸ್ಸೆಲ್ಸಿಯ 16 ವಿದ್ಯಾಥರ್ಿಗಳಿಗೆ ಸತ್ಕರಿಸಿ, 2 ಸಾವಿರ ರೂ.ಗಳ ಪ್ರೋತ್ಸಾಧನ ಡಿಡಿ ವಿತರಿಸಲಾಯಿತು. ಸಮಾಜದ ನಗರಘಟಕದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಆರ್.ಮಹಾದೇವಪ್ಪ ಅಬ್ಬೆತುಮಕೂರು, ಅನ್ನಪೂರ್ಣ ಜವಳಿ, ಶರಣು ಅವಂಟಿ, ಬಸವರಾಜ ಮೋಟ್ನಳ್ಳಿ ಇದ್ದರು.