ಸಾಧನೆಗೆ ಬಡತನ ಅಡ್ಡಿಯಲ್ಲ

Poverty is no barrier to achievement
ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಶಾಸಕರಾದ ರಾಜುಗೌಡ ಪಾಟೀಲ, ಅಶೋಕ ಮನಗೂಳಿ ಉದ್ಘಾಟಿಸಿದರು. ಸಿದ್ಧರಾಮ ಶಿವಾಚಾರ್ಯರು, ಶಾಂತಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗುರ ಇತರರಿದ್ದರು.
Published on

ಕಲಕೇರಿ: ಸಾಧನೆಗೆ ಬಡತನ, ಹಳ್ಳಿಯ ಜೀವನ, ಭಾಷಾ ಸಮಸ್ಯೆ ಇವೆಲ್ಲ ಸುಳ್ಳು ನೆಪಗಳಾಗಿದ್ದು, ಸಾಧಿಸುವ ಛಲ ಮನುಷ್ಯನಲ್ಲಿದ್ದರೆ ಏನು ಬೇಕಾದರು ಸಾಧಿಸಬಹುದು ಎಂದು ವಿಜಯಪುರದ ಗೆಜ್ಜಿ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಸುರೇಶ ಗೆಜ್ಜಿ ಹೇಳಿದರು.

ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನೆ, 2023-24ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸತತ ಪರಿಶ್ರಮ ಮತ್ತು ತಾಳ್ಮೆಯಿಂದ ಮುನ್ನುಗಿದರೆ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟುಕೆಗಳಲ್ಲಿ ಭಾಗಿಯಾಗುವುದು ಅತ್ಯಅವಶ್ಯಕವಾಗಿದೆ. ಓದು ಅಂಕಪಟ್ಟಿ ಪಡೆಯುವುದಕ್ಕೆ ಮಾತ್ರ ಸೀಮಿತವಾಬಾರದು. ಜೀವನ ರೂಪಿಸಿಕೊಳ್ಳುವ ಕಲೆಯಾಗಬೇಕು ಎಂದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಇಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ದೊಡ್ಡ ಹುದ್ದೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಅನೂಕೂಲ ಕಲ್ಪಿಸಲು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸಲು ವೈಯಕ್ತಿಕವಾಗಿ 1ಲಕ್ಷ ರೂ. ದೇಣಿಗೆ ನೀಡುವ ಘೋಷಣೆ ಮಾಡಿದರು.

ಶಾಸಕರಾದ ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಗ್ರಾಪಂ ಅಧ್ಯಕ್ಷ ರಾಜಹ್ಮದ ಶಿರಸಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೇಡರ ಅವರನ್ನು ಸನ್ಮಾನಿಸಲಾಯಿತು.

ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಪ್ರಾಚಾರ್ಯ ಸಿ.ಎಸ್. ಹಿರೇಮಠ ಮಾತನಾಡಿದರು.

2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಮಡಿವಾಳಮ್ಮ ಸಂದಿಮನಿ, ದ್ವಿತೀಯ ಸ್ಥಾನ ಪಡೆದ ಮಡಿವಾಳಮ್ಮ ಚಿಗರಿ, ತೃತೀಯ ಸ್ಥಾನ ಪಡೆದ ಖಮರೀನ್ ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಬಸವರಾಜ ಕುಂಬಾರ ಕಾಲೇಜು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಷಣ್ಮುಕಪ್ಪ ಝಳಕಿ, ಸಿದ್ದಣ್ಣ ಚಳ್ಳಗಿ, ವೀರಪ್ಪ ಝಳಕಿ, ಮಲಕಾಜಪ್ಪಗೌಡ ಬಿರಾದಾರ, ದೇವಿಂದ್ರ ಗುಮಶೆಟ್ಟಿ, ಅಪ್ಪಾಸಾಬ ಗುಮಶೆಟ್ಟಿ, ಪರಶುರಾಮ ಬೇಡರ, ಹಣಮಂತ ವಡ್ಡರ, ಎಸ್.ಎಸ್. ಕಲಶೆಟ್ಟಿ, ಡಾ.ಜಿ.ಜಿ. ಮೇಡೆದಾರ, ಬಿ.ಜಿ. ಚನಗೊಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net