ಸಾಧನೆಗೆ ಬಡತನ ಅಡ್ಡಿಯಲ್ಲ

upsc
ಚಿಕ್ಕಮಗಳೂರಿನಲ್ಲಿ ಎ.ಎಲ್.ಆಕಾಶ್ ಅವರನ್ನು ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿದರು. ಮಾಜಿ ಸಚಿವೆ ಡಿ.ಕೆ.ತಾರಾದೇವಿ, ಡಾ. ಕೆ.ಸುಂದರಗೌಡ, ಬಿ.ಬಿ.ನಿಂಗಯ್ಯ, ದಯಾನಂದ್, ದುರ್ಗೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 210ನೇ ಹಾಗೂ ರಾಜ್ಯಕ್ಕೆ 5ನೇ ರ‌್ಯಾಂಕ್ ಪಡೆದ ಎ.ಎಲ್.ಆಕಾಶ್ ಅವರನ್ನು ಮೈಸೂರು ಶ್ರೀ ನಾಲ್ವಡಿ ಕೃಷ್ಣರಾಜ್ ಒಡೆಯರ್ ಪ್ರತಿಷ್ಠಾನ, ಕನ್ನಡ ಸಂಘಟನೆಗಳ ಮುಖಂಡರು ಅಭಿನಂದಿಸಿದರು.

ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಮಾತನಾಡಿ, ಎ.ಎಲ್.ಆಕಾಶ್ ಯುಪಿಎಸ್ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯೆ ಯಾರ ಸ್ವತ್ತಲ್ಲ ಎಂಬುದನ್ನು ಹಿಂದುಳಿದ ಕುಟುಂಬದ ಆಕಾಶ್ ತೋರಿಸಿಕೊಟ್ಟಿದ್ದಾರೆ. ಸಾಧನೆ ಮಾಡಲು ಬಡತನ ಅಡ್ಡಿಯಲ್ಲ. ಶಿಸ್ತು, ಸಂಯಮ ಹಾಗೂ ಉನ್ನತ ನಡತೆ ಹೊಂದಿದ್ದರೆ ಗಗನದೆತ್ತರ ಬೆಳೆಯಬಹುದು ಎಂದು ತಿಳಿಸಿದರು.
ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಕೆ.ಸುಂದರಗೌಡ ಮಾತನಾಡಿ, ಎ.ಎಲ್.ಆಕಾಶ್ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜ ಸದೃಢಗೊಳಿಸಲಿ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜ್ಞಾನ ವಿಜ್ಞಾನ ಸಮಿತಿ ಸಹಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಎ.ಎಂ.ಪ್ರೇಮಾ ಲಕ್ಷ್ಮಣಗೌಡ, ಎ.ಎಂ.ಶಕುಂತಲಾ, ಬಿ.ಟಿ.ಪರಮೇಶ್, ಪ್ರತಿಷ್ಠಾನದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಆರ್.ನಂಜೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಸವಿನಮನೆ ಬೈರೇಗೌಡ, ದುರ್ಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net