ಸಾಧನೆಗೆ ಪರಿಶ್ರಮವೇ ದಾರಿ

panditharadya
ಸಾಣೇಹಳ್ಳಿ ಶಿವಕುಮಾರ ರಂಗಮಂದಿರದಲ್ಲಿ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಎ.ಸಿ.ಚಂದ್ರಪ್ಪ, ಎನ್.ಎಚ್.ಹೊನ್ನೇಶಪ್ಪ, ಎ.ಎಸ್.ಶಿಲ್ಪಾ ಇತರರಿದ್ದರು.
Published on

ಅಜ್ಜಂಪುರ : ಸಾಧನೆಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಇರುವುದೊಂದೇ ಪರಿಶ್ರಮದ ಹಾದಿ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಶಿವಕುಮಾರ ರಂಗಮಂದಿರದಲ್ಲಿ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಉನ್ನತ ಸ್ಥಾನಗಳಲ್ಲಿರುವವರೇ ಅಡ್ಡದಾರಿ ಹಿಡಿದು ಬದುಕಿನಲ್ಲಿ ವಿಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯವಾದ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಂಸ್ಕಾರ ದೊರೆಯದಿರುವುದು ಎಂದರು.
ಶಿವಕುಮಾರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ.ವಿ.ಗಂಗಾಧರಪ್ಪ ಮಾತನಾಡಿ, ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು. ಸಂಘಕ್ಕೆ ಮಹತ್ತರ ಶಕ್ತಿ ಇರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡರೆ ಅಸಾಧ್ಯವಾದ ಕೆಲಸಗಳನ್ನೂ ಸಾಧ್ಯವಾಗಿಸಬಹುದು ಎಂದರು.
ಕಳೆದ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಪಘಾತದಿಂದ ಶಸಚಿಕಿತ್ಸೆಗೆ ಒಳಗಾದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 530 ಅಂಕ ಪಡೆದ ಎನ್.ಕೆ.ಪಲ್ಲವಿಯನ್ನು ಅಭಿನಂದಿಸಲಾಯಿತು. ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಮುಖ್ಯಶಿಕ್ಷಕ ಎನ್.ಎಚ್.ಹೊನ್ನೇಶಪ್ಪ, ವಿ.ಬಿ.ಚಳಗೇರಿ, ಎ.ಎಸ್.ಶಿಲ್ಪಾ, ಬಿ.ಎಸ್.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net