

ಗುರುಮಠಕಲ್: ವಿದ್ಯಾರ್ಥಿಗಳು ಸಾಧನೆಗೆ ಅವಕಾಶ ಇರುವ ಮಾರ್ಗ ಕಂಡುಕೊAಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕು ಕ್ರಿಡಾಂಗಣದಲ್ಲಿ ಪದವಿ ಪೂರ್ವ ಶಿP್ಷÀಣ ಇಲಾಖೆ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಎಲ್ಲ ಕ್ಷೆತ್ರಗಳಲ್ಲೂ ಸವಾಲುಗಳು ಇವೆ. ನಮ್ಮ ಜೀವನ ರೂಪಿಸಿಕೊಳ್ಳಲು ಎದುರಾಗುವ ಸವಾಲು ಧೈರ್ಯದಿಂದ ಎದುರಿದಾಗ ಮಾತ್ರ ಯಾವ ಕ್ಷೇತ್ರದ¯್ಲÁದರೂ ಸಾಧನೆ ಮಾಡಬಹುದು. ವೈಫಲ್ಯಬರುವುದು ಸಹಜ. ಅದರಿಂದ ವಿಚಲಿತರಾಗದೇ ನಮ್ಮಲ್ಲಿರುವ ಪ್ರತಿಭೆ ಹೊರತಂದು ಸಾಧನೆಗೆ ಮುಂದಾಗಬೇಕು ಎಂದರು.
ಕ್ರಿಡಾ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದವರು ಬಹಳಷ್ಟು ಜನ ಇz್ದÁರೆ. ಅವರು ನಿಮಗೆ ಮಾದರಿಯಾಗಬೇಕು. ಮೊಬೈಲ್ ಈಗ ಎಲ್ಲರ ಸಮಯ ಹಾಳು ಮಾಡುತ್ತಿದೆ. ಇದರಿಂದ ಮಾನಸಿಕ, ದೈಹಿಕ ಬಳಲಿಕೆ ಹೆಚ್ಚುತ್ತದೆ. ಈ ಮೊಬೈಲ್ ಗೀಳಿನಿಂದ ಹೊರಬಂದು ಕ್ರಿಡಾ ಸಾಧನೆಗೆ ಸಮಯ ಮೀಸಲಿಡಿ ಎಂದು ಸಲಹೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಕುಳಗೇರಿ, ಭಾರತಿ ದಂಡೊತಿ, ಡಾ.ಶಿವಪ್ರಸಾದ ಮೈತ್ರಿ, ದೇವಿಂದ್ರಪ್ಪ ದುಳಖೇಡ, ನರಸರಡ್ಡಿ ಗಡ್ಡೆಸೂಗೂರ, ಸಂತೋಷ ಕುಮಾರ ನಿರೇಟಿ, ಸುದರ್ಶನರೆಡ್ಡಿ, ಲಕ್ಷ್ಮೀಕಾಂತರೆಡ್ಡಿ, ಮಲ್ಲಿಕಾರ್ಜುನ ಹೊಸಮನಿ ಇತರರಿದ್ದರು.