ಸಾಧನೆ ಛಲಗಾರನ ಸ್ವತ್ತು

24BK2_.
Published on

ಬಸವಕಲ್ಯಾಣ: ಸಾಧನೆ ಶ್ರಮಿಕನ ಸ್ವತ್ತಾಗಿದೆ, ವಿನಃ ಸೋಮಾರಿಯ ಸ್ವತ್ತಲ್ಲ. ಬದುಕಿನಲ್ಲಿ ಕಷ್ಟದ ಹೆಜ್ಜೆ ತುಳಿದಾಗ ಮಾತ್ರ ಸುಖದ ಹಾದಿಯಲ್ಲಿ ನಡೆಯಬಹುದು ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರದ ಎಸ್.ಎಸ್.ಕೆ. ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ೪೦ನೇ ಪುಣ್ಯಸ್ಮರಣೋತ್ಸವ ಮತ್ತು ವಿದ್ಯಾರ್ಥಿಗಳಿಗಾಗಿ ನಿರಂತರ ದಾಸೊಹ ಪ್ರಸಾದ ನಿಲಯ ಉದ್ಘಾಟಿಸಿ ಮಾತನಾಡಿ, ಸದೃಢ ಛಲ ಸಾಧನೆಗೆ ಸಹಕಾರಿ ಎಂದರು.
ಕಲಬುರಗಿ ಮಹಾನಗರ ಪಾಲಿಕೆ ಎಸ್ಟೆಟ್ ಅಧಿಕಾರಿ ಸಾವಿತ್ರಿ ಸಲಗರ ಮಾತನಾಡಿ, ಅಂದುಕೊAಡಿದ್ದು ಸಾಧಿಸಲು ಮೊದಲು ಸಾಧಕರ ಜೀವನ ಅರಿಯಬೇಕು. ಗುರಿ ಸಾಧನೆಗೆ ಕಠಿಣ ಪರಿಶ್ರಮ ಮತ್ತು ತ್ಯಾಗ ಅವಶ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಕ್ಷೇಮಲಿಂಗ ಬಿರಾದಾರ ಉಪನ್ಯಾಸ ನೀಡಿ, ಕೃಷಿ ಕಾಯಕದೊಂದಿಗೆ ಅನ್ನ, ಅಕ್ಷರ ದಾಸೋಹವನ್ನು ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಿರುವ ಪರಮ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಕೊಡುಗೆ ಅಪಾರ. ಹೆಣ್ಣು ಮಕ್ಕಳ ಶಾಲೆಯನ್ನು ಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ, ಬಸವರಾಜ ಎವಲೆ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹೈ.ಕ. ಪ್ರದೇಶಕ್ಕೆ ಶಿಕ್ಷಣ ಕ್ಷೇತ್ರದ ಪ್ರಗತಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಪೂಜ್ಯರು ಹಲವು ಜನರ ಬಾಳಿನಲ್ಲಿ ಬೆಳಕಾಗಿ ಬಂದು ಜ್ಞಾನ ದಾಸೊಹದ ಧಾರೆ ಎರೆದಿದ್ದಾರೆ ಎಂದರು.

ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಪ್ರೊ.ವಿಠೋಬಾ ಡೊಣ್ಣೇಗೌಡರು ವಂದಿಸಿದರು. ಉಪನ್ಯಾಸಕ ಅಂಬರೀಶ ಭೀಮಾಣೆ ನಿರೂಪಣೆ ಮಾಡಿದರು. ರಾಜೇಶ್ವರಿ ಪ್ರಾರ್ಥನಾ ಗೀತೆ ಹಾಡಿದರು.
ಪ್ರೊ.ಆರ್.ಡಿ.ಬಾಲಿಕಿಲೆ, ಡಾ.ಎಂ.ಜಿ.ಪಾಟೀಲ್, ಪ್ರೊ.ಎಸ್.ಎಸ್.ಬಾಬನಗೊಳ, ಡಾ.ಸುರೇಶ ಎಚ್.ಆರ್, ಶರಣು ಬಸವ ಎಂ., ಕಲ್ಯಾಣಪ್ಪ ಎನ್., ರತ್ನಸಾಗರ ಆರ್., ಸೂರ್ಯಕಾಂತ ನಾಸೆ, ವಿನಾಯಕ ಮುಳ್ಳೂರು, ಉಲ್ಲಾಸ ಬೊಕ್ಕೆ, ಹೇಮರಡ್ಡಿ, ದತ್ತಾತ್ರಿ, ರಾಜಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net