

ಗೋಣಿಕೊಪ್ಪ: ರೋಟರಿ ಸಂಸ್ಥೆ ವತಿಯಿಂದ ಆಂತುರಾಸ್ ಕೂರ್ಗ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ರ‌್ಯಾಂಕ್ ಪಡೆದ ಮಾಯಮುಡಿ ಗ್ರಾಮದ ಆಪಟ್ಟೀರ ಎಸ್.ಚಂಗಪ್ಪ, ಮಿಥುನಾ ದಂಪತಿ ಪುತ್ರಿ ಆಪಟ್ಟೀರ ಸಿ.ಕವಿನಾ, ಪಾಲಿಬೆಟ್ಟ ಚೆಷೈರ್‌ಹೋಂ ಕೂರ್ಗ್ ವಿಶೇಷ ಶಾಲೆಯ ಮುಖ್ಯಶಿಕ್ಷಕ ಎಸ್.ಸಿ.ಶಿವರಾಜ್, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ನೌಕರ ನಂಜುಂಡ, ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಸೀಗೆತೋಡು ನಿವಾಸಿ ಶಬರೀಶ, ಶಾಂತಾ ದಂಪತಿ ಪುತ್ರಿ ನಮೃತಾ ಸನ್ಮಾನ ಸ್ವೀಕರಿಸಿದರು.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ. ಕೆ. ಶುಭಾಷಿಣಿ, ವಲಯ ಸೇನಾನಿ ನೆವಿನ್ ಬೆಳ್ಯಪ್ಪ, ಕಾರ್ಯದರ್ಶಿ ಅರುಣ್ ತಮ್ಮಯ್ಯ ಇದ್ದರು.