ಸಾಧಕರ ಸನ್ಮಾನದಿಂದ ಇತರರಿಗೆ ಪ್ರೇರಣೆ

7
ಬೈಲಹೊಂಗಲದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಜರುಗಿತು. ಪ್ರಭುನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಬಿಇಒ ಎ.ಎನ್​. ಪ್ಯಾಟಿ, ನಾನಾಸಾಹೇಬ ಪಾಟೀಲ, ಶಿವಾನಂದ ಕುಡಸೋಮಣ್ಣವರ ಇತರರು ಇದ್ದರು.
Published on

ಬೈಲಹೊಂಗಲ: ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವುದರಿಂದ ಇತರರಿಗೆ ಪ್ರೇರಣೆಯಾಗಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಇಂಚಲ ಕ್ರಾಸ್​ ಬಳಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಟಕದ ಅಡಿಯಲ್ಲಿ ನೌಕರರ 2022&23 ಮತ್ತು 2024 ನೇ ಸಾಲಿನ ಸಾಧಕ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಮಕ್ಕಳ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾ ಪಲಾಯನವಾಗದಿದ್ದರೆ ಮತ್ತಷ್ಟು ಸದೃಢ ರಾಷ್ಟ್ರ ಕಟ್ಟಬಹದು ಎಂದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪಾಲಕರು ಮಕ್ಕಳ ಇಚ್ಛಾನುಸಾರ ಸ್ವತಂತ್ರವಾಗಿ ಅಧ್ಯಯನ ಮಾಡಲು ಪ್ರೇರಣೆ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿ ಬದುಕಿನಲ್ಲಿ ಯಶಸ್ಸು ಪಡೆಯುತ್ತಾರೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ನೌಕರರು ಸರ್ಕಾರದ ಅಂಗವಾಗಿದ್ದು, ಏಳನೆಯ ವೇತನ ಆಯೋಗದ ವರದಿ ಜಾರಿಗೆ ತರಬೇಕು ಎಂದರು. ಸಂದ ತಾಲೂಕಾಧ್ಯ ಶಿವಾನಂದ ಕುಡಸೋಮಣ್ಣವರ ಮಾತನಾಡಿ, ಕಚೇರಿ ಮುಂಭಾಗದಲ್ಲಿ ಸಂದ ಅಭಿವೃದ್ಧಿಗಾಗಿ ಮಳಿಗೆ ನಿರ್ಮಿಸಲಾಗುತ್ತಿದೆ ಎಂದರು.

ಏಳನೇ ವೇತನ ಆಯೋಗ ಜಾರಿ, ಎನ್​ಪಿಎಸ್​ ವಾಪಸಾತಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ತರಬೇಕೆಂದು ಆಗ್ರಹಿಸಿ ಶಾಸಕ ಮಹಾಂತೇಶ ಕೌಜಲಗಿ ಹಾಗೂ ತಹಸೀಲ್ದಾರ್​ ಹಣಮಂತ ಶಿರಹಟ್ಟಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.

ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್​ ಹಣಮಂತ ಶಿರಹಟ್ಟಿ, ಚಿತ್ರನಟ ಶಿವರಂಜನ ಬೋಳಣ್ಣವರ, ೇತ್ರ ಶಿಣಾಧಿಕಾರಿ ಎ.ಎನ್​. ಪ್ಯಾಟಿ, ಯುವ ಧುರೀಣ ನಾನಾಸಾಹೇಬ ಪಾಟೀಲ, ಸಿ.ಎಸ್​. ಭಜಂತ್ರಿ, ಡಾ.ವೀರೇಂದ್ರ ಹಡಪದ, ಸಂದ ಸವದತ್ತಿ ಅಧ್ಯ ಆನಂದ ಮೂಗಬಸವ, ೇತ್ರ ಸಮನ್ವಯಾಧಿಕಾರಿ ಬಿ.ಎನ್​. ಕಸಾಳೆ, ಬಿ.ಎಸ್​. ಕೀರಸ್ವಾಮಿಮಠ, ಡಿ.ಎಂ. ಮಿರ್ಜನ್ನವರ, ಐ.ಎ್​. ತಿಗಡಿ, ಬಿ.ಡಿ. ತಮ್ಮಣ್ಣವರ, ಮೀನಾ ಸುತಗಟ್ಟಿ, ಎಸ್​.ಡಿ. ಗಂಗಣ್ಣವರ, ಎಸ್​.ಪಿ. ಮತ್ತಿಕೊಪ್ಪ, ಸಿ.ವೈ. ಹಾದಿಮನಿ, ವೀರೇಶ ಕುಬಸದ, ರಾಮಲಿಂಗಪ್ಪ ಹಾದಿಮನಿ, ಸಂದ ಮಾಜಿ ಅಧ್ಯ ಎಸ್​.ಆರ್​.ಕಮ್ಮಾರ, ಎಂ.ಜಿ.ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು. ರಮೇಶಗೌಡ ದೊಡ್ಡಗೌಡ್ರ ಸ್ವಾಗತಿಸಿದರು. ಖಜಾಂಚಿ ಪರಶುರಾಮ ಸೊಂಟಕ್ಕಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧೀಕಿ ಕಲಾವತಿ ದೇಶನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net