ಸಾಧಕರ ಜೀವನ ಮಾದರಿಯಾಗಲಿ

16Raibag1
Published on

ರಾಯಬಾಗ:  ಗಣಿತ ತಜ್ಞ, ಆಧುನಿಕ ಮಾನವ ಕಂಪ್ಯೂಟರ್ ಎನಿಸಿಕೊಂಡಿರುವ ಜಿಲ್ಲೆಯ ಬಸವರಾಜ ಉಮರಾಣಿ ಅವರು, ಅಂಧ ವ್ಯಕ್ತಿಯಾದರೂ ಕಲಿಯಬೇಕೆಂಬ ಛಲದೊಂದಿಗೆ ಮಹಾನ ಸಾಧನೆ ಮಾಡಿದ್ದಾರೆ. ಇಂತಹ ಸಾಧಕ ವ್ಯಕ್ತಿಗಳನ್ನು ಜೀವನದಲ್ಲಿ ಮಾದರಿಯಾಗಿರಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ಸದಾಶಿವ ದೇಶಿಂಗೆ ಹೇಳಿದರು.

ತಾಲೂಕಿನ ಭಿರಡಿ ಗ್ರಾಮದಲ್ಲಿ 79ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಗ್ರಾಪಂ ಭಿರಡಿ, ರಾಯಣ್ಣ ಗೋ-ಗ್ರೀನ್ ೌಂಡೇಷನ್ ಹಾಗೂ ಆತ್ಮ ನಿರ್ಭರ ಸೇವಾ ಸಮೂಹ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿವತ್ತ ಯೋಧರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಉಪನ್ಯಾಸಕಿ ಡಾ.ರತ್ನಾ ಬಾಳಪ್ಪನ್ನವರ, ನಿವತ್ತ ಮುಖ್ಯಶಿಕ್ಷಕ ಅಶೋಕ ಮೊರಬದ ಮಾತನಾಡಿದರು. ಪಿಎಚ್.ಡಿ ಪದವಿ ಪಡೆದ ಡಾ.ರುಕ್ಮೀಣಿ ಪಾಂಡ್ರೆ ಮತ್ತು ನಿವತ್ತ ಯೋಧ ಗಜೇಂದ್ರ ನನದಿ ಅವರನ್ನು ಸತ್ಕರಿಸಲಾಯಿತು. ಸಕ್ಕುಬಾಯಿ ಪೂಜೇರಿ ಮತ್ತು ನಿರ್ಮಲಾ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು.

ರಾಯಣ್ಣ ಗೋ-ಗ್ರೀನ್ ೌಂಡೇಷನ್ ವತಿಯಿಂದ ದ್ವೀತಿಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಲ್ಯಾಪ್‌ಟಾಪ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಕಷ್ಣಾಬಾಯಿ ಭೆಂಡೆ, ಮಾಜಿ ಅಧ್ಯಕ್ಷೆ ರೇಖಾ ನಿಡುವಣಿ, ಪಿಡಿಒ ವಿದ್ಯಾನಂದ ಬಾನೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net