ಸಾಧಕರ ಚರಿತ್ರೆ ಸಾಧನೆಗೆ ಆದರ್ಶ

4-88
ಬೈಲಹೊಂಗಲ ಪಟ್ಟಣದ ಕೆಎಲ್‌ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಯಮಿ ಶ್ರೀಕರ ಕುಲಕರ್ಣಿ ಉದ್ಘಾಟಿಸಿದರು. ನಾಗರಾಜ ಗಸ್ತಿ, ವಿರೂಪಾಕ್ಷಪ್ಪ ಬೆಟಗೇರಿ, ಪ್ರಾಚಾರ್ಯ ಶ್ರೀಧರ ನಿರಡಿ ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ವಿದ್ಯಾರ್ಥಿಗಳು ಸಾಧನೆ ಮಾಡಿದ ಮಹನೀಯರ ಚರಿತ್ರೆ ಅರಿತು ಅವರ ಆದರ್ಶಗಳನ್ನು ಜೀವನದಲ್ಲಿ ಅವಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಉದ್ಯಮಿ ಶ್ರೀಕರ ಕುಲಕರ್ಣಿ ಹೇಳಿದರು.

ಪಟ್ಟಣದ ಕೆಎಲ್‌ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಶ್ರೀಧರ ನಿರಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎಸ್. ಅಬ್ಬಾಯಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಚ್.ಐ.ಸಂಕಣ್ಣವರ, ಐ.ಎನ್. ಹಾದಿಮನಿ, ಎಸ್.ಎಸ್. ಶರಣಪ್ಪನವರ, ವಿ.ಬಿ. ಪಾಟೀಲ, ಎ.ಎಂ. ಪಾಟೀಲ, ಎಂ.ಎ. ಸವದತ್ತಿಮಠ, ಎಸ್.ಆರ್. ಪಾಟೀಲ, ಎಂ.ಬಿ. ಕಡಬಿ, ಆರ್.ಎನ್. ವಾರಿ, ಎಂ.ಎ. ಮಗದುಮ್ಮ, ಎ.ಜಿ. ಬಡಿಗೇರ, ಆರ್.ಪಿ. ದೊಡ್ಡಹುಬ್ಬಳ್ಳಿ, ಸವಿತಾ ಖನಗೌಡರ, ಕೀರ್ತಿ ಬಿ., ಕೀರ್ತಿ ಪರಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net