ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

3 ckm 7
ಚಿಕ್ಕಮಗಳೂರು ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ೧೫೬ನೇ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತಿç ಜಯಂತಿಯ ಅಂಗವಾಗಿ ಭಜನೆ ನಡೆಸಲಾಯಿತು. ಎಂ.ಎನ್.ಷಡಾಕ್ಷರಿ, ವಿಶಾಲ ಷಡಾಕ್ಷರಿ, ಯೋಗೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತಿç ಅವರಂಥ ವiಹಾನ್ ವ್ಯಕ್ತಿಗಳ ಆದರ್ಶಗಳನ್ನು ನಾವೆಲ್ಲರು ಮೈಗೂಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರು ಸಾಧಿಸಲು ಸಾಧ್ಯ ಎಂದು ಮಾಡೆಲ್ ಶಾಲೆಯ ಸಂಸ್ಥಾಪಕ ಎಂ.ಎನ್.ಷಡಕ್ಷರಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ೧೫೬ನೇ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತಿç ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತಿç ಇಬ್ಬರೂ ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದವರು . ಗಾಂಧೀಜಿ ಇದ್ದ ಕಾಲದಲ್ಲಿ ನಾವು ಈ ನೆಲದಲ್ಲಿ ಹುಟ್ಟಿz್ದೆÃವೆ ಎಂದರೆ ಅದು ನಮ್ಮ ಪುಣ್ಯವೆ ಸರಿ ಎಂದು ಹೆಸರಾಂತ ವಿಜ್ಞಾನಿ ಅಲ್ಬರ್ಟ ಐನ್‌ಸ್ಟೀನ್ ಈ ರೀತಿ ಹೇಳಿದ್ದಾರೆ ಎಂದು ಬಣ್ಣಿಸಿದರು.

ಗಾಂಧೀಜಿ ಅವರ ಒಂದೊAದು ಗುಣವನ್ನು ಒಬ್ಬೊಬ್ಬರು ಅಡವಳಿಸಿಕೊಂಡರೆ ಈ ದೇಶದ ದಿಕ್ಕನ್ನು ಬದಲಿಸಬಹುದು. ಗಾಂಧೀಜಿ ಅವರು ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ, ಅಸ್ಪÊಶ್ಯತೆ , ಅಹಿಂಸೆ, ಮಿತವ್ಯಯ, ಸ್ವಚ್ಛತೆ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಅಲ್ಲದೆ ದುಂದು ವೆಚ್ಚ ಮಾಡಬಾರದು ಮತ್ತು ಸ್ವದೇಶಿ ವಸ್ತುಗಳ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಳ್ಳಬೇಕು ಎಂದು ಗಾಂಧೀಜಿ ಯಾವಾಗಲೂ ಹೇಳುತ್ತಿದ್ದರು ಎಂದರು.

ಪಾಶ್ಚಿಮಾತ್ಯರ ಆಚರಣೆ, ಸಂಸ್ಕೃತಿ ನಮ್ಮನ್ನು ಆಕ್ರಮಿಸುತ್ತಿದೆ . ಡಾಲರ್‌ನ ಬೆಲೆ ಇಂದು ಏರುತ್ತಿರುವದಕ್ಕೆ ಒಂದು ದೆಸೆಯಲ್ಲಿ ನಾವೇ ಕಾರಣ. ಏಕೆಂದರೆ ನಾವೆಲ್ಲರು ವಿದೇಶಿ ವಸ್ತುಗಳಿಗೆ ಮಾರು ಹೋಗಿ ಅದನ್ನು ಖರೀದಿಸಲು ಮುಂದಾಗುತಿz್ದÉÃವೆ. ಆದ್ದರಿಂದ ವಿದಾರ್ಥಿಗಳೆಲ್ಲರು ಇಂದಿನಿAದ ಪ್ರತಿಜ್ಞೆಮಾಡಿ ನಾವು ನಮ್ಮ ಸ್ವದೇಶಿ ವಸ್ತುಗಳನ್ನು ಖರೀದಿಸಿ ಮೇಕ್ ಇನ್ ಇಂಡಿಯಾವನ್ನು ಸಾಧಿಸುತ್ತೇವೆ. ವಿದೇಶೀ ವಸ್ತುಗಳಿಗೆ ಛೀಮಾರಿ ಹಾಕಲು ಮುಂದಾಗಬೇಕು ಎಂದು ಹೇಳಿದರು.

ಲಾಲ್ ಬಹುದ್ದೂರ್ ಶಾಸ್ತಿç ಅವರು ವಿದ್ವತ್ತು , ಸರಳತೆ ಹಾಗೂ ಗಟ್ಟಿ ನಿಲುವಿಗೆ ಹೆಸರಾದವರು. ಈ ಗುಣಗಳು ಅವರನ್ನು ಭಾರತದ ಯಶಸ್ವಿ ಮತ್ತು ಧೈರ್ಯವಂತ ಪ್ರಧಾನಮಂತ್ರಿಯನ್ನಾಗಿ ರೂಪಿಸಿದವು. ಇವರು ಸ್ವಾಭಿಮಾನಿಯಾಗಿದ್ದು, ವೈಯಕ್ತಿಕ ಪತ್ರವನ್ನು ಬರೆಯ ಬೇಕಾದರೆ ತಮ್ಮ ಕಚೇರಿಯ ಲೇಖನಿಯನ್ನು ಬಳೆಸದೆ ತನ್ನ ಸ್ವಂತ ಲೇಖನಿಯನ್ನು ಬಳಸುತ್ತಿದ್ದರು. ಇದು ಇಂದಿನ ರಾಜಕಾಣಿಗಳಿಗೆ ಮತ್ತು ಅಧಿಕಾರಿಗಳಿಗೆ ಆದರ್ಶಪ್ರಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ವಿಶಾಲ ಷಡಕ್ಷರಿ, ಮುಖ್ಯ ಶಿಕ್ಷಕ ಯೋಗೀಶ್ ಹಾಗೂ ಭೋಧಕ ಭೋಧಕೇತರ ವರ್ಗದವರು ಉಪಸ್ಥೀತರಿದ್ದರು. ಶಿಕ್ಷಕ ವರ್ಗದವರು ಸರ್ವಧರ್ಮ ಪ್ರಾರ್ಥನೆ ಮತ್ತು ಭಜನೆಯನ್ನು ನೇರವೇರಿಸಿಕೊಟ್ಟರು. ಸರ್ವರೂ ಶ್ರಮಧಾನವನ್ನು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net