ಸಾಧಕ ವಿದ್ಯಾರ್ಥಿ ಸಫ್ವಾನ್‌ಗೆ ಸನ್ಮಾನ

15.npk-5
Published on

ನಾಪೋಕ್ಲು: ಜೆಇಇ, ನೀಟ್ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸಮೀಪದ ಮೂರ್ನಾಡಿನ ವಿದ್ಯಾರ್ಥಿ ಜೆ.ಇ.ಸಫ್ವಾನ್ ಅವರನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಸನ್ಮಾನಿಸಿದರು.

ಎಚ್.ಎ.ಹಂಸ ಮಾತನಾಡಿ, ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆದು ಕುಟುಂಬಕ್ಕೆ, ಸಮಾಜಕ್ಕೆ ಮಾದರಿಯಾಗುವ ಉತ್ತಮ ಹುದ್ದೆಗೆ ಆಯ್ಕೆಯಾಗಿ ಬರಲಿ ಎಂದು ಶುಭ ಹಾರೈಸಿದರು

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಅಲ್ಪ ಸಂಖ್ಯಾತ ಮುಖಂಡ ಜುಬೇರ್, ಮೊಹಮ್ಮದ್ ಎಡಪಾಲ, ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ ಜಿಲ್ಲಾ ಮುಖ್ಯಸ್ಥ ನಿಯಾಜ್, ಖಾಲಿದ್ ಹಾಕತ್ತೂರು, ಪಿಡಿಒ ಅಬ್ದುಲ್ಲ ಪರವಂಡ ಸಿರಾಜ್, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಜಿಲ್ಲಾ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು

ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ ಜೆ.ಇ.ಸಫ್ವಾನ್, ಮೂರ್ನಾಡಿನ ಇಸ್ಮಾಯಿಲ್-ಸಹರಾಭಾನು ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net