ಸಾಧಕ ಮಹಿಳೆಯರ ಜತೆ ಚರ್ಚೆ

08 Jaggu 3
ಮಹಿಳಾ ಸಾಧಕರ ಚರ್ಚಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಲಾಯಿತು. ಡಾ.ಜ್ಯೋತಿ ಕವಳೇಕರ, ಸಬಿಹಾ ಹಿರಾನಿ, ಡಾ. ಸವಿತಾ ದೇಗಿನಾಳ, ಡಾ. ಶ್ವೇತಾ ಪಾಟೀಲ ಇದ್ದರು.
Published on

ಬೆಳಗಾವಿ: ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದಿಂದ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಸಿ.ವಿ. ರಾಮನ್​ ಸಭಾಂಗಣದಲ್ಲಿ ಮಹಿಳಾ ಸಾಧಕರ ಜತೆ ಚರ್ಚಾ ಕಾರ್ಯಕ್ರಮ ನಡೆಯಿತು.

ಬೆಳಗಾವಿಯ ಒಮೆಗಾ ಅಪ್​ಸೆಟ್​ ಸ್ಥಾಪಕಿ ಸಬಿಹಾ ಹಿರಾನಿ, ಸಂಜೀವಿನಿ ಫೌಂಡೇಶನ್​ನ ಅಧ್ಯಕ್ಷೆ ಡಾ. ಸವಿತಾ ದೇಗಿನಾಳ, ಕರ್ಮಭೂಮಿ ಫೌಂಡೇಶನ್​ನ ಸಂಸ್ಥಾಪಕಿ, ನಿರ್ದೇಶಕಿ ಡಾ. ಶ್ವೇತಾ ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಮೂವರು ಸಾಧಕರೂ ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಪೂಜಾ ಮೆಳವಂಕಿ ಮತ್ತು ಅಲ್ಫಾಜ್​ ಬಾಗವಾನ ನಿರೂಪಿಸಿದರು.

ಪ್ರಾಚಾಯೆರ್ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಬಲೀಕರಣ ಕೋಶದ ಸಂಚಾಲಕ ಡಾ.ಎಂ.ಎಂ. ಪುರಾಣಿಕ ಸ್ವಾಗತಿಸಿದರು. ಪ್ರಾಜಕ್ತಾ ಬುಗುಟಿ ವಂದಿಸಿದರು. ಅಮೀಶಾ ನಿರೂಪಿಸಿದರು. ಡಾ. ಕೀರ್ತಿ ಬ್ಯಾಡಗಿ ಪರಿಚಯಿಸಿದರು. ಖುಷಿ ಕುನ್ನೆ ನೃತ್ಯ ಪ್ರದರ್ಶಿಸಿದರು.

&&&

08 ಜಗ್ಗು 3

ಮಹಿಳಾ ಸಾಧಕರ ಚರ್ಚಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಲಾಯಿತು. ಡಾ.ಜ್ಯೋತಿ ಕವಳೇಕರ, ಸಬಿಹಾ ಹಿರಾನಿ, ಡಾ. ಸವಿತಾ ದೇಗಿನಾಳ, ಡಾ. ಶ್ವೇತಾ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net