ಸಾಧಕ ಮಕ್ಕಳು ಗ್ರಾಮದ ಶ್ರೇಯಸ್ಸಿಗಾಗಿ ಶ್ರಮಿಸಲಿ : ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಸಲಹೆ

1
Published on

ಮಾಲೂರು: ಕರೊನಾ ಸಂದರ್ಭದಲ್ಲೂ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿರುವ ಮಕ್ಕಳು ಗ್ರಾಮದ ಶ್ರೇಯಸ್ಸಿಗಾಗಿ ಶ್ರಮಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಭಾರತೀಯ ಜನತಾ ಪಕ್ಷದ ಫಲಾನುಭವಿಗಳ ಪ್ರಕೋಷ್ಠ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಮಕ್ಕಳು ಮಾಡಿರುವ ಉತ್ತಮವಾದ ಸಾಧನೆ ಇಲ್ಲಿಗೇ ನಿಲ್ಲದೆ ಉನ್ನತ ವಿದ್ಯಾಭ್ಯಾಸ ಮಾಡಿ ಉತ್ತಮ ಸ್ಥಾನ ಅಲಂಕರಿಸಬೇಕು. ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿರುವ ಹೂಡಿ ವಿಜಯ್​ಕುಮಾರ್​ ಅವರ ಸಾಮಾಜಿಕ ಸೇವೆ ಶ್ಲಾನೀಯ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಸದಸ್ಯರಾದ ಹೂಡಿ ವಿಜಯ್​ಕುಮಾರ್​ ಮಾತನಾಡಿ, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಂದ ಮಕ್ಕಳು ಹಾಗೂ ನಾವು ಆಶೀರ್ವಾದ ಪಡೆಯಲು ಪುಣ್ಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ತಾಲೂಕಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಈಗಾಗಲೇ ಪೋತ್ಸಾಹ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ನೀಡುವುದರೊಂದಿಗೆ ಪೋತ್ಸಾಹಿಸುವುದಾಗಿ ತಿಳಿಸಿದರು.

ಬಿಜೆಪಿ ಪಂಚಾಯತ್​ ಪ್ರಕೋಷ್ಠ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಆರ್​.ಪ್ರಭಾಕರ್​, ಹೈನುಗಾರಿಕೆ ಪ್ರಕೋಷ್ಠ ಸಮಿತಿಯ ಸದಸ್ಯ ವೆಂಕಟೇಶ್​ಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್​ ಆರಾಧ್ಯ, ಹಿರಿಯ ಮುಖಂಡರಾದ ವಿ.ಹನುಮಪ್ಪ, ದೇವರಾಜ್​ರೆಡ್ಡಿ, ಬಿ.ಆರ್​.ವೆಂಕಟೇಶ್​, ಬಿ.ಎನ್​.ರಾಜಾರಾಂ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ಭಾನುತೇಜ, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net