

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ವತಿಯಿಂದ ಮಾ.20ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ್ಳಲಾಗಿದೆ.
60-70 ವರ್ಷಗಳಿಂದ ಕಾಡಂಚಿನ ಆದಿವಾಸಿಗಳು ಹಾಗೂ ಗ್ರಾಮಾಂತರ ಪ್ರದೇಶದ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಗೆ ಕಂದಾಯ ಇಲಾಖೆ ದಾಖಲಾತಿ ನೀಡಬೇಕು. ಪಿಟಿಸಿಎಲ್ ಕಾಯ್ದೆ 1979ಕ್ಕೆ ಸೂಕ್ತ ತಿದ್ದುಪಡಿ ತರಬೇಕು. ಈ ಮೂಲಕ ಕುಟುಂಬಗಳಿಗೆ ಭೂಮಿ ಕೊಡಬೇಕು. ಪ್ರೊ.ಮುಜಾಫರ್ ಅಸ್ಸಾದಿ ವರದಿ ಯಥಾವತ್ ಜಾರಿಗೆ ತರಬೇಕು ಎಂದು ವೇದಿಕೆಯ ಮುಖಂಡ ಹರಿಹರ ಆನಂದಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆದಿವಾಸಿಗಳ ಅರಣ್ಯಹಕ್ಕು ಕಾಯ್ದೆ 2006 ಅನುಷ್ಠಾನಕ್ಕೆ ತರಬೇಕು. 219 ಹಾಡಿಗಳಿಗೆ, 164 ಜೇನುಕುರುಬರ ಸಮುದಾಯಕ್ಕೆ ಹಿಡುವಳಿ ಹಕ್ಕುಪತ್ರ ನೀಡಬೇಕು, ಲಕ್ಷ್ಮಣತೀರ್ಥ ನದಿಯನ್ನು ಪರಿಸರ ಮಾಲಿನ್ಯದಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದರು.