ಸಾಗವಾನಿ ತುಂಡು ಸಾಗಿಸಿದ್ದವರ ಬಂಧನ

04 YLP 03
Published on

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಹೊಸಳ್ಳಿ ಹಾಗೂ ಕೋಳಿಕೇರಿ ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರ ಕಡಿದು, ತುಂಡುಗಳನ್ನು ಮಾರಾಟ ಮಾಡಿದ್ದ ಮೂವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಕಲಘಟಗಿ ತಾಲೂಕಿನ ರಾಮನಾಳದ ಜಗದೀಶ ಶಂಕರಪ್ಪ ವಾಲೀಕಾರ, ಉಮೇಶ ಹನುಮಂತಪ್ಪ ವಾಲೀಕಾರ ಹಾಗೂ ಮುಂಡಗೋಡ ತಾಲೂಕಿನ ಕಂದಲಗೇರಿಯ ಪರಶುರಾಮ ಮಲಕಾಜಿ ಸಾಬಣ್ಣನವರ್ ಬಂಧಿತರು. ಇವರು ತಾಲೂಕಿನ ಕಿರವತ್ತಿ ಸಮೀಪದ ಹೊಸಳ್ಳಿ ಹಾಗೂ ಕೋಳಿಕೇರಿ ಅರಣ್ಯದಲ್ಲಿ ಅಕ್ರಮವಾಗಿ 1.50 ಲಕ್ಷ ರೂ. ಮೌಲ್ಯದ ಸಾಗವಾನಿ ಮರ ಕಡಿದು, ಮಹೀಂದ್ರಾ ಪಿಕಪ್ ವಾಹನದಲ್ಲಿ ಸಾಗಿಸಿ, ಕಲಘಟಗಿಯಲ್ಲಿರುವ ಬಸವೇಶ್ವರ ಸಾಮಿಲ್​ಗೆ ಮಾರಾಟ ಮಾಡಿದ್ದರು. ಪ್ರಕರಣವನ್ನು ಬೇಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಸಾಗವಾನಿ ತುಂಡುಗಳು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಡಿಸಿಎಫ್ ಗೋಪಾಲಕೃಷ್ಣ ಹೆಗಡೆ ಮಾರ್ಗದರ್ಶನದಲ್ಲಿ ಎಸಿಎಫ್​ಗಳಾದ ಅಶೋಕ ಭಟ್, ಎಸ್. ಎಂ. ವಾಲಿ, ಎನ್.ಎಲ್. ನದಾಫ್, ಬಾಲಸುಬ್ರಮಣ್ಯ, ಯಲ್ಲಾನಾಯಕ ಹಮಾನಿ, ಮಂಜುನಾಥ ಮರಿಬಸವನಗೌಡ, ಮಂಜುನಾಥ ಕಾಂಬಳೆ, ವಿನಯ ರಾಮಗೋನಟ್ಟಿ, ಕಿರಣ ನಾಯ್ಕ, ಮಲ್ಲಪ್ಪ ಎಚ್. ವಿಶಾಲ ವಿ.ಡಿ, ಸಿಬ್ಬಂದಿ ದಿನೇಶ ಬನವಾಸಿ, ಪರಶುರಾಮ ಮಡಿವಾಳ, ಸಂತೋಷ ವಾಲ್ಮೀಕಿ, ಚಂದ್ರಶೇಖರ್ ಹೀರೇಮಠ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net