ಸಾಗರದ ಗಣಪತಿ ಕೆರೆಯ ವಿಸ್ತೀರ್ಣ 30 ಎಕರೆಗೆ ವಿಸ್ತಾರ; 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಹರತಾಳು ಹಾಲಪ್ಪ

SGR WEBBB
Published on

ಸಾಗರ: ಪ್ರವಾಸೋದ್ಯಮ ಇಲಾಖೆ ಸಹಕಾರ ಹಾಗೂ ನಗರಸಭೆ ಅನುದಾನ ಒಳಗೊಂಡಂತೆ ನಗರದ ಹೃದಯಭಾಗದಲ್ಲಿರುವ ಗಣಪತಿ ಕೆರೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಗಣಪತಿ ಕೆರೆಯ ದಂಡೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ಭದ್ರಗೊಳಿಸಲಾಗುತ್ತಿದೆ. ಕೆರೆಗಾಗಿ ಎಲ್ಲ ಸಮುದಾಯದವರು ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. 24 ಎಕರೆ 35 ಗುಂಟೆ ಇರುವ ಕೆರೆಯ ಜಾಗವನ್ನು 30 ಎಕರೆಗೆ ವಿಸ್ತರಿಸಿ ಭದ್ರಗೊಳಿಸುತ್ತಿದ್ದೇವೆ ಎಂದರು.

ಶರಾವತಿ ಹಿನ್ನೀರಿನ ಗುಬ್ಬಗೂಡು ಪ್ರದೇಶದಿಂದ 337 ಹಳ್ಳಿಗಳಿಗೆ ಕುಡಿಯುವ ನೀರು ಉಣಿಸುವ 127 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು ಇದಕ್ಕಾಗಿ ಮಾರ್ಗದ ಮಧ್ಯದಲ್ಲಿ 64 ಟಾಂ್ಯಕ್‌ಗಳನ್ನು ನಿರ್ಮಿಸಲಾಗುವುದು. ಸಾಗರಕ್ಕೆ ತಾಗುವ ಪ್ರಮುಖ ರಸ್ತೆಗಳನ್ನು ವಿಸ್ತರಿಸಲಾಗುತ್ತಿದೆ. ಸಾಗರವನ್ನು ಕಂಡರೆ ಅದು ಗ್ರಾಮದಂತೆ ಭಾಸವಾಗಬಾರದು ಎಂಬುದು ನಮ್ಮ ಪ್ರಮುಖ ಉದ್ದೇಶ. ಅಭಿವೃದ್ಧಿಯ ವಿಚಾರದಲ್ಲಿ ಕೆಲವರು ಸುಮ್ಮನೆ ಟೀಕೆ ಮಾಡುತ್ತಾರೆ. ಅದಕ್ಕೆ ನಮ್ಮ ಕೆಲಸವೇ ಉತ್ತರ ಕೊಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net