ಸಾಗರ ಸೀಲ್​ಡೌನ್​ಗೆ ಒಪ್ಪದ ಸಿಎಂ

11 sgr 3
Published on

ಸಾಗರ: ಇಡೀ ಸಾಗರವನ್ನು ಸೀಲ್​ಡೌನ್ ಮಾಡುವ ಸಂಬಂಧ ಕೆಲವರು ಪ್ರಸ್ತಾಪ ಸಲ್ಲಿಸಿದ್ದರು. ಈ ಬಗ್ಗೆ ಸಿಎಂಗೆ ತಿಳಿಸಿದಾಗ ಅವರು ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಕರೊನಾ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ನಿಯಮದಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ. ಸೀಲ್​ಡೌನ್ ಪ್ರಶ್ನೆ ಇಲ್ಲ. ನಿಯಮ ಪಾಲನೆ ಮೂಲಕ ಕರೊನಾ ಜತೆ ಬದುಕುವುದು ಅನಿವಾರ್ಯ ಎಂದರು.

ಉಪವಿಭಾಗೀಯ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಕರೊನಾ ಆಸ್ಪತ್ರೆ ಆರಂಭಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಈಗಾಗಲೆ 80 ಹಾಸಿಗೆ ಸಾಮರ್ಥ್ಯಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಪವಿಭಾಗೀಯ ಆಸ್ಪತ್ರೆಯ ಒಂದು ಭಾಗವನ್ನು ಸಂಪೂರ್ಣ ಪ್ಲೈವುಡ್ ಇನ್ನಿತರೆಯಿಂದ ಬಂದ್ ಮಾಡಬೇಕು. ಕರೊನಾ ವಿಭಾಗಕ್ಕೂ ಸಾಮಾನ್ಯ ರೋಗಿಗಳ ವಿಭಾಗಕ್ಕೂ ಸಂಪರ್ಕ ಇಲ್ಲದಂತೆ ನೋಡಿಕೊಳ್ಳಬೇಕು. ಕರೊನಾ ವಿಭಾಗಕ್ಕೆ ಬರಲು ಪ್ರತ್ಯೇಕ ದಾರಿ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಸುಳ್ಳು ಸುದ್ದಿ ವಿರá-ದ್ಧ ಕ್ರಮ: ತಾಲೂಕು ವ್ಯಾಪ್ತಿಯಲ್ಲಿ ಕರೊನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಸಾಮಾಜಿಕ ಜಾಲತಾಣದ ಅಡ್ಮಿನ್​ಗಳನ್ನು ವಿಚಾರಣೆ ನಡೆಸಿ. ಕರೊನಾ ಸೋಂಕಿತರ ಹೆಸರು ಪ್ರಕಟಿಸುವುದು, ಅನಗತ್ಯವಾಗಿ ಸೋಂಕು ಹೆಚ್ಚುತ್ತಿರುವ ಕುರಿತು ಮಾಹಿತಿ ನೀಡುವುದು ಅಕ್ಷಮ್ಯ. ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದರು.

ಎಸಿ ಡಾ. ಎಲ್.ನಾಗರಾಜ್, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಡಿವೈಎಸ್ಪಿ ವಿನಾಯಕ ಎಸ್.ಶೆಟ್ಟಿಗಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಟಿಎಚ್​ಒ ಡಾ. ಕೆ.ಎಸ್.ಮೋಹನ್, ಪ್ರಮುಖರಾದ ಡಾ. ಪ್ರಕಾಶ್ ಬೋಸ್ಲೆ, ಡಾ. ಅರುಣಕುಮಾರ್, ಡಾ. ಸುಮಾ, ಡಾ. ವಾಸುದೇವ್, ಸರ್ಕಲ್ ಇನ್ಸ್​ಪೆಕ್ಟರ್ ಅಶೋಕುಮಾರ್, ಬಾಲಸುಬ್ರಹ್ಮಣ್ಯಂ, ಚೇತನರಾಜ್ ಕಣ್ಣೂರು, ಟಿ.ಡಿ.ಮೇಘರಾಜ್, ಲೋಕನಾಥ್ ಬಿಳಿಸಿರಿ, ಗಣೇಶಪ್ರಸಾದ್, ವಿ.ಮಹೇಶ್ ಇದ್ದರು.

ವೃದ್ಧರು, ಕೂಲಿ ಕೆಲಸಗಾರರು, ಹೋಂ ಕ್ವಾರಂಟೈನ್​ನಲ್ಲಿರುವವರಿಗೆ ಅಕ್ಕಿಯ ಅಗತ್ಯ ಇದ್ದರೇ ವೈಯಕ್ತಿಕವಾಗಿ, ತಾಲೂಕು ಆಡಳಿತದ ಮೂಲಕ ಕಲ್ಪಿಸಲಾಗುವುದು. ಅನಿವಾರ್ಯ ಇರುವವರು ಎಸಿ, ತಹಸೀಲ್ದಾರ್, ಪೌರಾಯುಕ್ತರು ಅಥವಾ ಶಾಸಕರ ಕಚೇರಿ ಸಂರ್ಪಸಬಹುದು.

| ಹರತಾಳು ಹಾಲಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net