ಸಾಗರ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಜಟಾಪಟಿ

13 sgr 1
Published on

ಸಾಗರ: ನಗರಸಭೆಯ 26 ಮತ್ತು 31ನೇ ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡದಿರುವುದು ಮತ್ತು ಸದಸ್ಯರ ಮಾತಿಗೆ ಅ„ಕಾರಿಗಳು ಮನ್ನಣೆ ಕೊಡದಿರುವುದನ್ನು ವಿರೋ„ಸಿ ವಾರ್ಡ್ ಸದಸ್ಯರು ಸಭಾಂಗಣಕ್ಕೆ ಇಳಿದು ಪ್ರತಿಭಟನೆ ನಡೆಸಿದರು.

ಸೋಮವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ 31ನೇ ವಾರ್ಡ್‍ನ ಸಬೀನಾ ತನ್ವೀರ್, ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಸಾಕಷ್ಟು ಬಾರಿ ಅ„ಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಸದಸ್ಯರನ್ನು ಬಿಟ್ಟು ಮೂರನೇ ವ್ಯಕ್ತಿ ಕರೆ ಮಾಡಿದಾಗ ತಕ್ಷಣ ಪೌರ ಕಾರ್ಮಿಕರನ್ನು ಕಳುಹಿಸಿ ಸ್ವಚ್ಛಗೊಳಿಸಿz್ದÁರೆ. ಅ„ಕಾರಿಗಳ ವರ್ತನೆಯಿಂದ ಜನರ ಎದುರು ತಲೆತಗ್ಗಿಸುವಂತೆ ಆಗಿದೆ. ನಗರಸಭೆಯಲ್ಲಿ ಸದಸ್ಯರ ಮಾತಿಗೆ ಬೆಲೆ ಇಲ್ಲ ಎಂದು ದೂರಿದರು.

ತಮ್ಮ ವಾರ್ಡ್‍ನಲ್ಲಿ ಕಸದ ರಾಶಿ ಬಿದ್ದಿದ್ದನ್ನು ಮೊಬೈಲ್‍ನಲ್ಲಿ ಸೆರೆಹಿಡಿದುಕೊಂಡು ಬಂದು ಪ್ರದರ್ಶನ ಮಾಡಿ ಮಾತನಾಡಿದ 26ನೇ ವಾರ್ಡ್‍ನ ಶಾಹಿನಾ ಬಾನು, ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ವಾರ್ಡ್‍ನಲ್ಲಿ ತಲೆಎತ್ತಿ ತಿರುಗುವಂತೆ ಇಲ್ಲ ಎಂದು ಅಧ್ಯಕ್ಷರ ಎದುರು ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಬೀನಾ ತನ್ವೀರ್ ಮತ್ತು ಶಾಹಿನಾ ಬಾನು ಸಭಾಂಗಣದ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿದರು. ಸದಸ್ಯರ ಹೋರಾಟಕ್ಕೆ ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಸೈಯದ್ ಜಾಕೀರ್, ಮಧುಮಾಲತಿ ಬೆಂಬಲ ಸೂಚಿಸಿ ಸದಸ್ಯರಿಗೆ ಅಗೌರವ ತರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಸದಸ್ಯರಿಗೆ ಅಗೌರವ ತರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈಗಾಗಲೇ ಎಲ್ಲ ವಾರ್ಡ್‍ಗಳಲ್ಲೂ ಸ್ವಚ್ಛತೆಗೆ ಗಮನಹರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾರ್ಡ್ ಸ್ವಚ್ಛತೆಗೆ ಹೋಗುವಾಗ ಸ್ಥಳೀಯ ಸದಸ್ಯರಿಗೆ ತಿಳಿಸುವುದು ಕಡ್ಡಾಯ. ಅ„ಕಾರಿಗಳು ಸದಸ್ಯರ ಗಮನಕ್ಕೆ ತರದೆ ಸ್ವಚ್ಛತೆಗೆ ಹೋಗಬಾರದು ಎಂದು ತಾಕೀತು ಮಾಡಿದರು.

ತುರ್ತು ಕಾಮಗಾರಿ ನಿರ್ವಹಣೆ ಕುರಿತು ಸಿದ್ಧಪಡಿಸಿರುವ ಕ್ರಿಯಾಯೋಜನೆಗೆ ಆಡಳಿತ ಪಕ್ಷದ ಶಂಕರ್ ಅಳ್ವಿಕೋಡಿ ವಿರೋಧ ವ್ಯಕ್ತಪಡಿಸಿ, ಕಳೆದ ಎರಡೂವರೆ ವರ್ಷದಿಂದ ಸದಸ್ಯರ ಗಮನಕ್ಕೆ ತರದೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಈ ಬಾರಿ ಸಹ ತುರ್ತು ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾದೆ. ಆದರೆ ನಗರ ಮಧ್ಯಭಾಗಕ್ಕೆ ಹೆಚ್ಚು ಒತ್ತು ನೀಡಿದೆ. ಹಾಲಿ ತಯಾರಿಸಿರುವ ಕ್ರಿಯಾಯೋಜನೆ ರದ್ದುಪಡಿಸಿ ಹೊಸದಾಗಿ ಸಿದ್ಧಪಡಿಸುವಂತೆ ಮನವಿ ಮಾಡಿದರು.

ಆರ್.ಶ್ರೀನಿವಾಸ್ ಮೇಸಿ ಮಾತನಾಡಿ, ಅಣಲೆಕೊಪ್ಪದಲ್ಲಿ ಪುನೀತ್ ರಾಜ್‍ಕುಮಾರ್ ಉದ್ಯಾನ ನಿರ್ಮಿಸಲು ಅಗತ್ಯ ಸಿದ್ಧತೆ ನಡೆಸಿ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು. ಪುನೀತ್ ಹೆಸರಿನಲ್ಲಿ ಉದ್ಯಾನ ನಿರ್ಮಿಸಲು ಪಕ್ಷಾತೀತವಾಗಿ ಒಪ್ಪಿಗೆ ಸಹ ಸಿಕ್ಕಿದೆ. ಕಳೆದ ಐದಾರು ಸಭೆಗಳಲ್ಲಿ ವಿಷಯ ಚರ್ಚೆಯಾಗುತ್ತಿದೆಯೇ ವಿನಾ ಪಾಕ್ ನಿರ್ಮಾಣಕ್ಕೆ ನಗರಸಭೆ ಮುಂದೆ ಬರುತ್ತಿಲ್ಲ ಎಂದು ದೂರಿದರು.

ಉಪಾಧ್ಯಕ್ಷ ವಿ.ಮಹೇಶ್, ಪೌರಾಯುಕ್ತ ಸಿ.ಚಂದ್ರಪ್ಪ, ನಗರಸಭೆ ಅ„ಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net