ಸಾಗರ ಮಾರಿಕಾಂಬಾ ಜಾತ್ರೆ ಪೂರ್ವ ಸಿದ್ಧತೆ; ದೇವಸ್ಥಾನಕ್ಕೆ ಬಣ್ಣ ಹಚ್ಚುವ ಶಾಸ್ತ್ರಕ್ಕೆ ಚಾಲನೆ

SGR WEB
Published on

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ 7ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಾರಿಕಾಂಬಾ ದೇವಸ್ಥಾನ ಹಾಗೂ ಗೋಪುರಕ್ಕೆ ಬಣ್ಣ ಹಚ್ಚುವ ಶಾಸ್ತ್ರವನ್ನು ನೆರವೇರಿಸಲಾಯಿತು.

ಅಮ್ಮನವರ ಗಂಡನಮನೆ ದೇವಸ್ಥಾನದಲ್ಲಿ ಗೋಪುರಕ್ಕೆ ಸಾಂಕೇತಿಕವಾಗಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಪುರುಷೋತ್ತಮ್ ಬಣ್ಣಹಚ್ಚುವ ಮೂಲಕ ಚಾಲನೆ ನೀಡಿದರು.

ಸುಂದರ್ ಸಿಂಗ್ ಮಾತನಾಡಿ, ಫೆ.7ರಿಂದ ಮಾರಿಕಾಂಬಾ ಜಾತ್ರೆ ಪ್ರಾರಂಭಗೊಳ್ಳಲಿದೆ. ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ, ಅರ್ಚಕರ ಮನೆಗಳಿಗೆ, ಕಚೇರಿ, ರುದ್ರಭೂಮಿ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲ ಕಡೆ ಬಣ್ಣ ಹಚ್ಚಲಾಗುತ್ತಿದೆ. ಡಿ.27ಕ್ಕೆ ಮರ ಕಡಿಯುವುದು, ಜ.31ಕ್ಕೆ ಅಂಕೆ ಹಾಕುವ ಶಾಸ್ತ್ರ ಇರುತ್ತದೆ ಎಂದು ಮಾಹಿತಿ ನೀಡಿದರು.

ಗಂಡನ ಮನೆ ದೇವಸ್ಥಾನದ ಪ್ರಧಾನ ಅರ್ಚಕ ರವಿ ಪೋತರಾಜ ಮಾತನಾಡಿ, ಶನಿವಾರದಿಂದ ಬಣ್ಣದ ಕೆಲಸದ ಮೂಲಕ ಜಾತ್ರೆ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಲಾಗಿದೆ. ಮಾರಿಕಾಂಬಾ ದೇವಿ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಸಲು ಅಗತ್ಯ ಸಿದ್ಧತೆಯನ್ನು ಸಮಿತಿ ಮಾಡಿಕೊಂಡಿದೆ. ಜಾತ್ರೆಯಲ್ಲಿ ಎಲ್ಲ ಸಾಂಪ್ರದಾಯಿಕ ಆಚರಣೆ ಮತ್ತು ಆರಾಧನೆಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು ಸಮಿತಿ ಎಲ್ಲ ಅಗತ್ಯ ಕ್ರಮವನ್ನು ಕೈಗೊಂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net