ಸಾಗರ: ಬೆಂಕಿ ಅವಘಡಕ್ಕೆಎರಡು ಅಂಗಡಿ ಭಸ್ಮ

SGR WEB
Published on

ಸಾಗರ: ನಗರದ ಶಿವಪ್ಪನಾಯಕ ವೃತ್ತದ ಇಕ್ಕೇರಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿ ಮತ್ತು ಮರಮುಟ್ಟುಗಳನ್ನು ಮಾರಾಟ ಮಾಡುವ ಅಂಗಡಿಗೆ ಸೋಮವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಅಪಾರ ನಷ್ಟವಾಗಿದೆ.

ಕಿರಾಣಿ ಅಂಗಡಿಯ ಪಕ್ಕಕ್ಕೆ ತಾಕಿಕೊಂಡಿರುವ ಅಂಗಡಿಯ ಮಾಲೀಕ ಶೇಕ್ ಶಾಹಿದ್ ತಮ್ಮ ಅಂಗಡಿ ಹಿಂಭಾಗದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕ ಪಟ್ಟು ಅಂಗಡಿಯಿಂದ ಹೊರಬಂದರು. ಸುತ್ತಮುತ್ತಲ ಅಂಗಡಿಯವರೂ ಎರಡು ಅವಳಿ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಜತೆ ಸೇರಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಗಣೇಶ್ ಅವರ ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್ ಒಂದನ್ನು ಗಮನಿಸಿದ ಇಮ್ರಾನ್ ಎನ್ನುವ ಯುವಕ ತಕ್ಷಣ ಹೊಗೆಯ ಮಧ್ಯೆಯೇ ಅಂಗಡಿಯೊಳಗೆ ಧಾವಿಸಿ ಹೊರಗೆ ಎಸೆದ ಹಿನ್ನೆಲೆಯಲ್ಲಿ ಭಾರಿ ಅವಘಡ ತಪ್ಪಿತು. ಎರಡೂ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅವಘಡಕ್ಕೆ ಶಾರ್ಟ್‌ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ. ಸಾಗರ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net