ಸಾಕ್ಷಾೃಧಾರ ಸಂಗ್ರಹ ಕುರಿತಂತೆ ಪೊಲೀಸರಿಗೆ ತರಬೇತಿ

CTD NEWS POLICE
Published on

ಚಿತ್ರದುರ್ಗ: ಅಪರಾಧ ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಂಗ್ರಹಿಸಿ ಕೊಡಬೇಕಾದ ಸಾಂಕ್ಷಾೃಧಾರಗಳಿಗೆ ಸಂಬಂಧಿಸಿದಂತೆ ಮೈಸೂರಿನ ಕರ್ನಾಟಕ ಪೊಲೀಸ್ ಆಕಾಡೆಮಿಯಿಂದ ಶುಕ್ರವಾರ ಆನ್‌ಲೈನ್ ತರಬೇತಿ ಏರ್ಪಡಿಸಲಾಗಿತ್ತು.
ದಾವಣಗೆರೆ ಪೂರ್ವ ವಲಯ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾವೇರಿಯ ಹಲವು ತನಿಖಾಧಿಕಾರಿಗಳು ಹಾಗೂ ಅವರ ಸಹಾಯಕರು ಪಾಲ್ಗೊಂಡಿದ್ದರು.
ಕ್ರೈಂ ಸೀನ್ ಹ್ಯಾಂಡ್ಲಿಂಗ್, ಸೂಕ್ಷ್ಮ ಸಾಕ್ಷಾೃಧಾರಗಳ ಸಂಗ್ರಹ, ಅವುಗಳ ಪ್ಯಾಕಿಂಗ್, ಡಿಜಿಟಿಟಲ್ ಎವಿಡೆನ್ಸ್ ಇತ್ಯಾದಿ ಸಂಗ್ರಹಿಸಿದ ಸಾಕ್ಷಾಧಾರಗಳನ್ನು ಯಾವುದೇ ಲೋಪಗಳಾಗದಂತೆ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಹೇಗೆ ಕಳಿಸಿಕೊಡ ಬೇಕೆಂಬುದರ ಕುರಿತಂತೆ ತರಬೇತಿ ನೀಡಲಾಯಿತು.
ಚಿತ್ರದುರ್ಗ ಜಿಲ್ಲಾರಕ್ಷಣಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ತರಬೇತಿಯಲ್ಲಿ ಹೊಳಲ್ಕೆರೆ ಸಿಪಿಐ ಎಂ.ಬಿ.ಚಿಕ್ಕಣ್ಣವರ್, ಸಿಇಎನ್ ಠಾಣೆ ಪಿಐ ಎನ್.ವೆಂಕಟೇಶ್ ಮತ್ತಿತರರ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net