ಸಾಕ್ಷರತೆ ಭವಿಷ್ಯದ ಶಿಕ್ಷಣಕ್ಕೆ ರಹದಾರಿ

CTD--F.L.N
Published on

ಚಿತ್ರದುರ್ಗ: ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಬೆಳೆಸುವುದರಿಂದ ಭವಿಷ್ಯದ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಡಯಟ್ ಪ್ರಾಚಾರ‌್ಯ ಎಂ. ನಾಸಿರುದ್ದೀನ್ ಹೇಳಿದರು. ಡಯಟ್‌ನಲ್ಲಿ ಎಫ್‌ಎಲ್‌ಎನ್‌ನಲ್ಲಿ ಶೇ.100 ಪ್ರಗತಿ ಸಾಧಿಸಿದ ಚಿತ್ರದುರ್ಗ ತಾಲೂಕು ಶಾಲಾ ಶಿಕ್ಷಕರಿಗೆ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಓದು, ಬರಹದ ಸಾಮರ್ಥ್ಯ ಬೆಳೆಸಿ ಭಾಷಾ ಕೌಶಲದ ಸಾಮರ್ಥ್ಯ ಹೆಚ್ಚಿಸಿದರೆ ಉನ್ನತ ಶಿಕ್ಷಣ ಪಡೆಯಲು ಸುಲಭವಾಗುತ್ತದೆ ಎಂದರು.

ಶಿಕ್ಷಕರಿಗೆ ಪ್ರೇರಣೆ ನೀಡಲು ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನದಲ್ಲಿ 100 ರಷ್ಟು ಸಾಧನೆ ಮಾಡಿರುವ ಪ್ರತಿ ತಾಲೂಕಿನಿಂದ 5 ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.

ಹಿರಿಯ ಉಪನ್ಯಾಸಕಿ ಎಚ್. ಗಿರಿಜಾ, ಉಪನ್ಯಾಸಕರಾದ ಯು. ಸಿದ್ದೇಶಿ, ಎಸ್. ಬಸವರಾಜು, ಬಿಆರ್‌ಸಿ ತಿಪ್ಪೇರುದ್ರಪ್ಪ, ಶ್ರೀನಿವಾಸ್, ಬಿಆರ್‌ಪಿ ಖಲಂದರ್, ಸಿಆರ್‌ಪಿ ವರಲಕ್ಷ್ಮೀ, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net